ಕಳೆದ ಎರಡು ವಾರಗಳಿಂದ ಚಿನ್ನದ ಮಾಸ್ಕ್ ಧರಿಸುವ ಹೊಸ ಶೋಕಿಯ ಟ್ರೆಂಡ್ ಎಲ್ಲೆಡೆ ಸದ್ದು ಮಾಡುತ್ತಿದೆ. ಪುಣೆ ಹಾಗೂ ಒಡಿಶಾದ ಇಬ್ಬರು ವ್ಯಕ್ತಿಗಳು ಆರ್ಡರ್ ಕೊಟ್ಟು ಮುಂಬಯಿಯ ಜವೇರಿ ಬಝಾರ್‌ನಲ್ಲಿ ಚಿನ್ನದ ಮಾಸ್ಕ್‌ಗಳನ್ನು ಮಾಡಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.
ಇದೀಗ ಕೊಯಮತ್ತೂರಿನ ಚಿನ್ನದ ವ್ಯಾಪಾರಿಯೊಬ್ಬರು ಚಿನ್ನ ಹಾಗು ಬೆಳ್ಳಿಯ ಎಳೆಗಳಿಂದ ಮಾಡಲ್ಪಟ್ಟ ಮಾಸ್ಕ್‌ಗಳನ್ನು ತಯಾರಿಸಿದ್ದಾರೆ. ನಾವೆಲ್ ಕೊರೋನಾ ವೈರಸ್‌ನ ಭೀತಿಯು ಜನರಲ್ಲಿನ ಕ್ರಿಯೇಟಿವಿಟಿಯನ್ನೂ ವರ್ಧಿಸುತ್ತಿದೆ ಎಂದು ಹೇಳಬಹುದಾಗಿದೆ.
18 ಕ್ಯಾರೆಟ್ ಚಿನ್ನದಿಂದ ಮಾಡಲಾದ ಮಾಸ್ಕ್‌ಗೆ 2.75 ಲಕ್ಷ ರೂ.ಗಳ ಬೆಲೆ ಇದ್ದರೆ, ಬೆಳ್ಳಿ ಮಾಸ್ಕ್‌ಗೆ 15,000 ರೂ.ಗಳ ಬೆಲೆ ಇರುವುದಾಗಿ ಚಿನ್ನದ ವ್ಯಾಪಾರಿ ರಾಧಾಕೃಷ್ಣನ್ ಸುಂದರಮ್ ಆಚಾರ್ಯ ತಿಳಿಸಿದ್ದಾರೆ.
https://twitter.com/Gurcharanjeet/status/1284833679554916352?ref_src=twsrc%5Etfw%7Ctwcamp%5Etweetembed%7Ctwterm%5E1284833679554916352%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fprecautionary-bling-coimbatore-based-goldsmith-makes-masks-with-gold-and-silver-thread%2F624354