ಇಡೀ ವಿಶ್ವವನ್ನು ಕೊರೊನಾ ಕಂಗೆಡಿಸಿದ್ದು, ಆರ್ಥಿಕ ಪರಿಸ್ಥಿತಿಯನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಇದರ ಮಧ್ಯೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಆಸ್ತಿಯಲ್ಲಿ ಒಂದೇ ದಿನದಲ್ಲಿ ಆಗಿರುವ ಹೆಚ್ಚಳ ಬೆರಗಾಗಿಸುವಂತಿದೆ.
ಸೋಮವಾರದಂದು ಜೆಫ್ ಬೆಜೋಸ್ ಅವರ ಆಸ್ತಿಯಲ್ಲಿ 13 ಬಿಲಿಯನ್ ಡಾಲರ್ ಹೆಚ್ಚಳವಾಗಿದ್ದು, 2012 ರಲ್ಲಿ ಬ್ಲೂಂಬರ್ಗ್ ಬಿಲೇನಿಯರ್ ಇಂಡೆಕ್ಸ್ ಆರಂಭಿಸಿದ ಬಳಿಕ ಇದೇ ಮೊದಲ ಬಾರಿ ವ್ಯಕ್ತಿಯೊಬ್ಬರ ವೈಯಕ್ತಿಕ ಆಸ್ತಿ ಮೌಲ್ಯದಲ್ಲಿ ಭಾರಿ ಹೆಚ್ಚಳವಾದಂತಾಗಿದೆ.
ವಿಶ್ವದ ಅತಿ ಶ್ರೀಮಂತ ಎಂಬ ಜೆಫ್ ಬೆಜೋಸ್ ಅವರ ಹೆಗ್ಗಳಿಕೆ ಈಗ ಮುಂದುವರೆದಿದ್ದು, ಅವರ ವಿಚ್ಛೇದಿತ ಪತ್ನಿ ಆಸ್ತಿಯೂ ಸೋಮವಾರ ಒಂದೇ ದಿನ 4.6 ಬಿಲಿಯನ್ ಡಾಲರ್ ಹೆಚ್ಚಳವಾಗಿದ್ದು, ಇದರಿಂದ ವಿಶ್ವದ 13ನೇ ಅತಿ ಶ್ರೀಮಂತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.