ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಕೇಳುತ್ತಲೇ ಇರುತ್ತಾರೆ. ಇಡ್ಲಿ, ದೋಸೆಗಿಂತ ಅವರಿಗೆ ಚಿಪ್ಸ್, ಚಾಕೊಲೇಟ್ ಗಳು ಹೆಚ್ಚು ಇಷ್ಟವಾಗುತ್ತದೆ. ಈಗಂತೂ ಹೊರಗಡೆಯಿಂದ ತಂದು ಕೊಡುವುದಕ್ಕೂ ಭಯ ಪಡುವ ಸ್ಥಿತಿ ಇದೆ. ಹಾಗಾಗಿ ಇಲ್ಲಿ ಸುಲಭವಾಗಿ ಆಲೂಗಡ್ಡೆ ಚಿಪ್ಸ್ ಮಾಡುವ ವಿಧಾನ ಇದೆ ನೋಡಿ.
5 ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಒರೆಸಿಕೊಂಡು ಮೇಲಿನ ಸಿಪ್ಪೆ ತೆಗೆದುಕೊಳ್ಳಿ. ನಂತರ ಈ ಆಲೂಗಡ್ಡೆಯನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ನೀರು ಹಾಕಿ ಒಮ್ಮೆ ತೊಳೆದುಕೊಳ್ಳಿ. ಒಂದು ಟವೆಲ್ ನ ಸಹಾಯದಿಂದ ಇದರಲ್ಲಿನ ನೀರಿನ ಪಸೆಯನ್ನೆಲ್ಲಾ ಒರೆಸಿಕೊಳ್ಳಿ. ನಂತರ ಸ್ಲೈಸರ್ ನಿಂದ ಆಲೂಗಡ್ಡೆಯನ್ನು ಚಿಕ್ಕದಾಗಿ ಸ್ಲೈಸ್ ಮಾಡಿಕೊಳ್ಳಿ.
ನಂತರ ಇದರಲ್ಲಿನ ನೀರಿನ ಪಸೆ ಕೂಡ ಚೆನ್ನಾಗಿ ಒರೆಸಿಕೊಂಡು ಒಂದು ಪ್ಲೇಟಿಗೆ ಹಾಕಿ. ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಈ ಆಲೂಗಡ್ಡೆ ಪೀಸ್ ಅನ್ನು ಹಾಕಿ ಹದ ಉರಿಯಲ್ಲಿ ಚೆನ್ನಾಗಿ ಕರಿದು ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ಉಪ್ಪು, ಸ್ವಲ್ಪ ಖಾರದಪುಡಿ, ಚಾಟ್ ಮಸಾಲ ಸೇರಿಸಿ ಚಿಪ್ಸ್ ಹುಡಿಯಾಗದಂತೆ ಮಿಕ್ಸ್ ಮಾಡಿಕೊಳ್ಳಿ.