ಈ ಕೊರೊನಾ ಮಾನವೀಯತೆಯನ್ನು ಮರೆಸುತ್ತಿದೆ. ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಕೊರೊನಾ ಬಂದ ವ್ಯಕ್ತಿಯನ್ನು ಕುಟುಂಬಸ್ಥರು, ಸಂಬಂಧಿಕರೇ ದೂರವಿಡ್ತಿದ್ದಾರೆ. ಇದಕ್ಕೆ ಲಕ್ನೋದಲ್ಲಿ ನಡೆದ ಘಟನೆ ಇನ್ನೊಂದು ಸಾಕ್ಷಿಯಾಗಿದೆ.
ಲಕ್ನೋದಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಕೊರೊನಾ ಪಾಸಿಟಿವ್ ವರದಿ ಬಂದ ನಂತ್ರ ಹೆಂಡತಿಯನ್ನು ಗುರುತಿಸಲು ಪತಿ ನಿರಾಕರಿಸಿದ. ಗರ್ಭಿಣಿಗೆ ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಪತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಕೂಡ ನಿರ್ಲಕ್ಷ್ಯ ಮಾಡಿದ್ದಾರೆ. ಇದ್ರಿಂದಾಗಿ ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿದೆ.
ಜುಲೈ 4 ರಂದು ಮಹಿಳೆಯನ್ನು ಹೆರಿಗೆಗಾಗಿ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಮಯದಲ್ಲಿ, ವೈದ್ಯರು ಕೊರೊನಾ ಪರೀಕ್ಷೆ ಮಾಡಿದ್ದಾರೆ. ವರದಿ ಪಾಸಿಟಿವ್ ಬಂದಿದೆ. ಆಸ್ಪತ್ರೆ ಸಿಬ್ಬಂದಿ ಪತಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಇದನ್ನು ನಿರಾಕರಿಸಿ ಪತಿ, ಆಸ್ಪತ್ರೆಯಲ್ಲಿಯೇ ಪತ್ನಿಯನ್ನು ಬಿಟ್ಟು ಹೋಗಿದ್ದಾನೆ.