ಜಮ್ ಶೆಡ್ ಪುರದ ಕೋವಿಡ್ ರೋಗಿಯ ಮನೆಗೆ ನುಗ್ಗಿದ ಕಳ್ಳರು ನಗದು ಮತ್ತು ಆಭರಣಗಳೊಂದಿಗೆ ಪಲಾಯನ ಮಾಡಿದ್ದಾರೆ. ಆದರೆ ಕಳ್ಳತನಕ್ಕೆ ಮುಂಚೆ ಅವರು ಮಟನ್, ಅನ್ನ, ಚಪಾತಿ ಬೇಯಿಸಿ ತಿಂದು ತೇಗಿದ್ದಾರೆ.
ಜುಲೈ 8ರಂದು ಸೋಂಕು ಇರುವುದು ಖಚಿತವಾದ ಮೇಲೆ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನವೇ ಕಳ್ಳರು ಅವರ ಮನೆಯ ಹಿಂಬಾಗಿಲ ಮೂಲಕ ಒಳಪ್ರವೇಶಿಸಿ ಕನ್ನ ಹಾಕಿದ್ದಾರೆ.
ಶುಕ್ರವಾರ ಮನೆ ಪರೀಕ್ಷಿಸಲು ಅಲ್ಲಿಗೆ ಹೋದ ನೆರೆಹೊರೆಯವರು ರೋಗಿಯ ಸಹೋದರನಿಗೆ ಕಳ್ಳತನದ ಮಾಹಿತಿ ನೀಡಿದರು.
ಅಸಮಾನ್ಯ ಕಳ್ಳರು ಭರ್ಜರಿ ಅಡುಗೆ ತಯಾರಿಸಿ ಊಟ ಮಾಡಿ ನಂತರ 50 ಸಾವಿರ ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗಿರುವುದು ಗಮನಕ್ಕೆ ಬಂದಿದೆ. ಸೋಂಕಿತ ಸ್ಥಳೀಯ ಕಣ್ಗಾವಲು ಪಡೆಯಲ್ಲಿದ್ದವರು. ಟಿಎಂಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.