ಕೊರೊನಾ ಸೋಂಕು ತಡೆಗೆ ಅನೇಕ ದೇಶಗಳ ವಿಜ್ಞಾನಿಗಳು, ತಜ್ಞರು ಲಸಿಕೆ ಕಂಡು ಹಿಡಿಯತೊಡಗಿದ್ದಾರೆ ಈಗಾಗಲೇ ಅಂತಿಮ ಹಂತದಲ್ಲಿ ಲಸಿಕೆ ಪ್ರಯೋಗಗಳಿದ್ದು, ಬಿಡುಗಡೆಗೆ ಸಿದ್ಧತೆ ನಡೆದಿದೆ. ಹೀಗಿರುವಾಗಲೇ ರಷ್ಯಾ ವಿಶ್ವದ ಮೊದಲ ಕೊರೊನಾ ಲಸಿಕೆ ಬಿಡುಗಡೆ ಮಾಡಲು ಸಜ್ಜಾಗಿದೆ.
ಮುಂದಿನ ತಿಂಗಳು ಸಾರ್ವಜನಿಕ ಬಳಕೆಗೆ ವಿಶ್ವದ ಮೊದಲ ಕೊರೊನಾ ಲಸಿಕೆ ಬಿಡುಗಡೆಗೆ ಮಾಡಲಾಗುವುದು. ರಷ್ಯಾ ಆರೋಗ್ಯ ಸಚಿವ ಮಿಕಾಯಿಲ್ ಮೊರಾಷ್ಕೋ ಈ ಕುರಿತು ಮಾತನಾಡಿ, ಮೊದಲ ಹಂತದಲ್ಲಿ ರಷ್ಯಾ, ಅಮೆರಿಕ, ಯುಎಇ, ಸೌದಿ ಅರೇಬಿಯಾ ರಾಷ್ಟ್ರಗಳಲ್ಲಿ ಆಗಸ್ಟ್ ನಲ್ಲಿ ಬಿಡುಗಡೆ ಮಾಡಲಿರುವ ಲಸಿಕೆಯ ಪ್ರಯೋಜನ ಸಿಗಲಿದೆ ಎಂದು ಹೇಳಿದ್ದಾರೆ.
ರಷ್ಯಾದಲ್ಲಿ 3 ಕೋಟಿ ಲಸಿಕೆ ತಯಾರಿಸಲು ಕ್ರಮಕೈಗೊಳ್ಳಲಾಗಿದ್ದು, ಕೊನೆಹಂತದ ಕ್ಲಿನಿಕಲ್ ಪ್ರಯೋಗ ಬಾಕಿ ಉಳಿದಿದೆ. ಅದಕ್ಕಿಂತ ಮೊದಲೇ ಮುಂದಿನ ತಿಂಗಳು ಸಾರ್ವಜನಿಕವಾಗಿ ಲಸಿಕೆಯನ್ನು ಬಿಡುಗಡೆ ಮಾಡಲು ರಷ್ಯಾ ಕ್ರಮ ಕೈಗೊಂಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಲಸಿಕೆ ಕಂಡು ಹಿಡಿಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆಗಸ್ಟ್ 3ರ ನಂತರ ಲಸಿಕೆ ಸಿಗಲಿದೆ ಎಂದು ಹೇಳಲಾಗಿದೆ.