ವಯಸ್ಸಾದಂತೆ ಮುಖದ ಕಾಂತಿ ಕಡಿಮೆಯಾಗುತ್ತದೆ. ಮುಖದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಹಾಗಾಗಿ ನೀವು ಹೇಗೆ ಮೇಕಪ್ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸೌಂದರ್ಯದ ಗುಟ್ಟು ಅಡಗಿರುತ್ತದೆ.
ವಯಸ್ಸಾಗುತ್ತಿದ್ದಂತೆ ನಿಮ್ಮ ತ್ವಚೆ ಮೃದುವಾಗುತ್ತದೆ. ತಿಳಿ ಫೌಂಡೇಶನ್ ಹಚ್ಚಿಕೊಂಡರೆ ಮುಖದ ಮೇಲೆ ಗೆರೆಗಳು ಮತ್ತು ನೆರಿಗೆಗಳು ಎದ್ದು ಕಾಣುತ್ತವೆ. ಇದರಿಂದ ವಯಸ್ಸಾದಂತೆ ಕಾಣಬಹುದು. ಇದನ್ನು ತಪ್ಪಿಸಲು ದಪ್ಪನೆಯ ಫೌಂಡೇಶನ್ ಬಳಸಿ. ಇದರಿಂದ ನಿಮ್ಮ ಮುಖದ ಸುಕ್ಕುಗಳು ಮರೆಯಾಗುತ್ತದೆ.
ಐಶ್ಯಾಡೋದ ಕೆಳಗೆ ದಪ್ಪಗೆ ಕಣ್ಣುಗಳಿಗೆ ಬಣ್ಣ ಹಚ್ಚುವುದರಿಂದ ನಿಮಗೆ ವಯಸ್ಸಾದಂತೆ ಕಾಣಬಹುದು. ಐಶ್ಯಾಡೋ ಬಳಸುವ ಮೊದಲೇ ಪ್ರಿಮಿಯರ್ ಹಾಕಿಕೊಳ್ಳುವುದು ಒಳ್ಳೆಯದು. ಇದು ಕಣ್ಣಿಗೆ ಭಾರವಾಗುವುದಿಲ್ಲ. ಬಣ್ಣದ ಆಯ್ಕೆಯಲ್ಲೂ ಅಷ್ಟೇ ಕಂದು, ಕೆಂಪು ಮತ್ತು ಹಳದಿ ಬಣ್ಣದ ಶ್ಯಾಡೋ ಬಳಸುವುದನ್ನು ಬಿಟ್ಟು ಜ್ಯುವೆಲ್ ಟೋನ್ ಅಯ್ಕೆ ಮಾಡಿ ಕಣ್ಣುಗಳನ್ನು ಹೆಚ್ಚು ನೈಜಗೊಳಿಸಿ.
ಕಣ್ಣಿನ ಕೆಳಗೆ ಕನ್ಸಿಲರ್ ಬಳಸಿ ಕಪ್ಪು ಕಲೆಯನ್ನು ಮರೆ ಮಾಚಬಹುದು ಎಂಬುದೇನೋ ಸರಿ. ಅದರೆ ಇದು ನೆರಿಗೆಯನ್ನು ಎದ್ದು ಕಾಣುವಂತೆ ಮಾಡುತ್ತದೆ. ಹಾಗಾಗಿ ಇದರಿಂದ ದೂರವಿರುವುದೇ ಒಳ್ಳೆಯದು.