ಬ್ಯಾಂಕ್ಗಳಲ್ಲಿ ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವವರ ಸಂಖ್ಯೆ ತೀರಾ ಕಡಿಮೆ. ಅನೇಕ ಮಂದಿ ಎಷ್ಟೋ ವರ್ಷಗಳಿಂದಲೂ ಸಾಲ ವಾಪಸ್ ಮಾಡದೇ ಹಾಗೆಯೇ ಇರುತ್ತಾರೆ. ಇದೀಗ ಇಂತವರಿಂದಲೇ ಆರ್ಥಿಕ ವ್ಯವಹಾರಗಳಿಗೆ ಬಲವಾದ ಹೊಡೆತ ಬೀಳುತ್ತಿದೆ ಎಂದು ಹೇಳಲಾಗುತ್ತಿದೆ.
ಹೌದು, ಈ ಬಗ್ಗೆ ಮಾತನಾಡಿರುವ ಆರ್ಬಿಐ ಮಾಜಿ ಗವರ್ನರ್ ರಘುರಾಂ ರಾಜನ್, ಸರಿಯಾದ ಸಮಯಕ್ಕೆ ಸಾಲ ಮರುವಾಪತಿ ಆಗುತ್ತಿಲ್ಲ. ಹೀಗಾಗಿ ಬ್ಯಾಂಕ್ಗಳಲ್ಲಿನ ವಸೂಲಾಗದ ಸಾಲದ ಗಾತ್ರವು ಮುಂದಿನ ಆರು ತಿಂಗಳಲ್ಲಿ ಯಾರೂ ಊಹಿಸದ ಮಟ್ಟಕ್ಕೆ ಬೆಳೆಯಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಇವರ ಮಾತನ್ನು ಗಮನಿಸಿದರೆ, ಸಾಲ ಪಡೆದ ವ್ಯಕ್ತಿ ಸಾಲ ವಾಪಸ್ ಮಾಡದಿರುವುದೂ ಆರ್ಥಿಕ ಹಿಂಜರಿತಕ್ಕೆ ಕಾರಣ ಎನ್ನಬಹುದು.
ಲಾಕ್ಡೌನ್ ಸಮಯದಲ್ಲಿ ಅನೇಕ ಆರ್ಥಿಕ ವ್ಯವಹಾರಗಳಿಗೆ ಹೊಡೆತ ಬಿದ್ದಿವೆ. ಕೊರೊನಾ ಸಾಕಷ್ಟು ಹೊಡೆತವನ್ನು ನೀಡಿದೆ. ಆದರೆ ಇದಕ್ಕೆ ನಾವು ಚಿಂತಿಸಬೇಕಿಲ್ಲ. ಶಕ್ತಿಯುತ ಸಂಪನ್ಮೂಲಗಳ ಸದ್ಬಳಕೆಯಾದರೆ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ.