ಕೊರೊನಾ ನಮ್ಮ ದೇಶಕ್ಕೆ ಬಂದಿದ್ದು ಚೀನಾದಿಂದಲೇ. ಅದು ವಿಮಾನಗಳ ಮೂಲಕ. ಹೀಗಾಗಿಯೇ ವಿಮಾನ ಹಾರಾಟವನ್ನೇ ನಿಲ್ಲಿಸಲಾಗಿತ್ತು. ಆದರೆ ಇದೀಗ ಜುಲೈ 31ರ ನಂತರ ವಿಮಾನ ಹಾರಾಟ ಮತ್ತೆ ಪ್ರಾರಂಭವಾಗುವ ಸಾಧ್ಯತೆ ಇದೆ. ನೀವೇನಾದರೂ ವಿಮಾನದಲ್ಲಿ ಪ್ರಯಾಣ ಮಾಡಬೇಕು ಅಂದರೆ ಒಂದು ಷರತ್ತು ಪಾಲಿಸಬೇಕು.
ಹೌದು, ಇಂಡಿಗೋ ಏರ್ಲೈನ್ಸ್ ಪ್ರಯಾಣಿಕರಿಗೆ ಷರತ್ತೊಂದನ್ನು ಹಾಕಿ ವಿಮಾನದಲ್ಲಿ ಪ್ರಯಾಣ ಮಾಡಲಿಕ್ಕೆ ಅನುವು ಮಾಡುತ್ತಿದೆ. ಅದು ಏನೆಂದರೆ, ಪ್ರಯಾಣಿಕರು ಪಕ್ಕದ ಸೀಟಿನ ಟಿಕೆಟ್ ದರವನ್ನೂ ಭರಿಸಬೇಕು. ಅಂತರ ಕಾಯ್ದುಕೊಂಡಿದ್ದರೆ ಸೋಂಕು ತಗುಲುವುದಿಲ್ಲ ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ.
ಇನ್ನು ಜುಲೈ 24ರಿಂದ ಡಬಲ್ ಸೀಟ್ ಬುಕಿಂಗ್ ಆರಂಭವಾಗಲಿದೆ. ಸದ್ಯ ಲಾಕ್ಡೌನ್ ಘೋಷಣೆಯಾದಾಗ ವಿಮಾನಯಾನಗಳ ಮೇಲೂ ನಿರ್ಬಂಧ ಹೇರಲಾಗಿತ್ತು. ಈ ನಿರ್ಬಂಧವನ್ನು ಜುಲೈ 31 ರವರೆಗೆ ವಿಸ್ತರಣೆ ಮಾಡಿದೆ ಕೇಂದ್ರ ಸರ್ಕಾರ. 31 ರ ನಂತರ ವಿಮಾನ ಹಾರಾಟ ಪ್ರಾರಂಭವಾಗುವ ಸಾಧ್ಯತೆ ಇದೆ.