ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಸರ್ಕಾರ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೊಳಿಸಿದೆ.
ರಾಜ್ಯದ ಇತರೆ ಜಿಲ್ಲೆಗಳಲ್ಲೂ ಕೆಲವು ಕಡೆ ಪೂರ್ಣ ಹಾಗೂ ಭಾಗಶಃ ಲಾಕ್ ಡೌನ್ ಜಾರಿಗಳಿಸಲಾಗಿದ್ದು, ಇಷ್ಟಾದರೂ ಕೂಡಾ ಸೋಂಕಿತರ ಸಂಖ್ಯೆ ಇಳಿಮುಖವಾಗಿಲ್ಲ.
ಇದರ ಮಧ್ಯೆ ರಾಜ್ಯದ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಸಹಜವಾಗಿಯೇ ಜ್ವರ, ಕೆಮ್ಮು, ಶೀತ ಮೊದಲಾದ ಬಾಧೆಗಳಿಂದ ಬಳಲುತ್ತಿದ್ದಾರೆ.
ಇವುಗಳೂ ಕೂಡಾ ಕೊರೊನಾ ರೋಗ ಲಕ್ಷಣವಾಗಿರುವ ಕಾರಣ ಸಾರ್ವಜನಿಕರು ಆತಂಕದಿಂದಲೇ ಕಾಲ ಕಳೆಯುವಂತಾಗಿದೆ. ಇದರ ಮಧ್ಯೆ ಕೊರೊನಾ ಕುರಿತು ವೈದ್ಯರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ʼಇಂಟರೆಸ್ಟಿಂಗ್ ಇನ್ ಸೈಡರ್ʼ ಎಂಬ ಯೂಟ್ಯೂಬ್ ಖಾತೆಯಲ್ಲಿ ಹಂಚಿಕೆಯಾಗಿರುವ ಈ ವಿಡಿಯೋದಲ್ಲಿ ಕೊರೊನಾ ಕುರಿತಂತೆ ಸವಿವರವಾದ ಮಾಹಿತಿ ನೀಡಿರುವ ವೈದ್ಯರು, ಭಯದಿಂದಲೇ ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಕೊರೊನಾ ಎಲ್ಲ ವೈರಲ್ ಕಾಯಿಲೆಯಂತೆ ಇದೂ ಸಹ ಒಂದು. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ನೀವೂ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.