ಭಾರೀಗಾತ್ರದ ಆನೆಯನ್ನು ಪುಟ್ಟ ಹುಡುಗನೊಬ್ಬ ಮೈ ಸವರುತ್ತಾ ನಿಂತ ವಿಡಿಯೋ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಟ್ವಿಟರ್ ನಲ್ಲಿ ವಿಡಿಯೋವನ್ನು ಶೇರ್ ಮಾಡಿದ್ದು, ಕ್ಯಾಚಿ ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋ ನೋಡಿದರೆ ಮಾತೇ ಹೊರಡುತ್ತಿಲ್ಲ. ವನ್ಯಜೀವಿ ಛಾಯಾಗ್ರಾಹಕ ಬೃಹತ್ತಾದ ಆನೆಯನ್ನು ಚಿತ್ರೀಕರಿಸುತ್ತಿದ್ದಾಗ ಅವರ ಮಗು ಆನೆ ಬಳಿಗೆ ಹಲೋ ಹೇಳಲು ಹೋಗಿದ್ದನು….ಸೌಮ್ಯ ದೈತ್ಯ….ಎಂದು ವಿವರಣೆ ನೀಡಿದ್ದಾರೆ.
ಆನೆ ಸಮೀಪ ಹೋದ ಆ ಪುಟ್ಟ ಬಾಲಕ ತದೇಕಚಿತ್ತದಿಂದ ಕೆಲ ಹೊತ್ತು ಆನೆಯನ್ನೇ ನೋಡುತ್ತಾ ನಿಲ್ಲುತ್ತಾನೆ. ಬಳಿಕ ಧೈರ್ಯದಿಂದ ಆನೆಯ ಸೊಂಡಿಲು ಸವರುತ್ತಾನೆ. ಆನೆ ಮಾತ್ರ ಶಾಂತರೀತಿಯಲ್ಲಿ ಹುಲ್ಲು ತಿನ್ನುವುದು ಮುಂದುವರಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. 25 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಸಾವಿರಾರು ಟ್ವಿಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
https://twitter.com/susantananda3/status/1283787042040590336?ref_src=twsrc%5Etfw%7Ctwcamp%5Etweetembed%7Ctwterm%5E1283787042040590336%7Ctwgr%5E&ref_url=https%3A%2F%2Fwww.indiatoday.in%2Ftrending-news%2Fstory%2Fviral-video-shows-little-kid-petting-massive-bull-elephant-s-trunk-internet-says-beautiful-1701521-2020-07-17
https://twitter.com/MO07015660/status/1284013829131612161?ref_src=twsrc%5Etfw%7Ctwcamp%5Etweetembed%7Ctwterm%5E1284013829131612161%7Ctwgr%5E&ref_url=https%3A%2F%2Fwww.indiatoday.in%2Ftrending-news%2Fstory%2Fviral-video-shows-little-kid-petting-massive-bull-elephant-s-trunk-internet-says-beautiful-1701521-2020-07-17