ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮನುಷ್ಯನ ಮೂತಿಯಂತೆಯೇ ಇರುವ ಮೀನಿನ ಚಿತ್ರವೊಂದು ಭಾರೀ ವೈರಲ್ ಆಗಿತ್ತು.
ನೋಡಿದ ತಕ್ಷಣ ಚಕಿತಗೊಳಿಸುವಂತೆ ಇರುವ ಚಿತ್ರದಲ್ಲಿನ ಮೀನಿಗೆ ತೊಂಡೆಹಣ್ಣಿನಂತಹ ತುಟಿ, ದಾಳಿಂಬೆ ಕಾಳಿನಂತೆ ಜೋಡಿಸಿಟ್ಟ ಹಲ್ಲುಗಳಿವೆ.
ಆದರೆ, ಈ ಚಿತ್ರದ ಅಸಲಿಯತ್ತನ್ನು ಹುಡುಕಿ ಹೊರಟ ಮತ್ಸ್ಯ ತಜ್ಞರು ಮನುಷ್ಯನಂತೆ ಮೂತಿಯುಳ್ಳ ಮೀನಿರಲು ಸಾಧ್ಯವೇ ಇಲ್ಲ. ಇದು ಶುದ್ಧ ಸುಳ್ಳು ಎಂದು ಪ್ರತಿಪಾದಿಸಿದ್ದಾರೆ.
ಸಿಡ್ನಿಯ ತಾಂತ್ರಿಕ ವಿವಿ ಪರಿಸರ ಶಾಸ್ತ್ರಜ್ಞ ಡೇವಿಡ್ ಬೂತ್ ಅವರು ಸಿಎನ್ಇಟಿಗೆ ನೀಡಿರುವ ಹೇಳಿಕೆ ಪ್ರಕಾರ, ಟ್ರಿಗರ್ ಫಿಶ್ ಗಳಿಗೆ ಹಲ್ಲುಗಳಿರುತ್ತವೆಯಾದರೂ ಮನುಷ್ಯನ ಮೂತಿ ಹೋಲುವ ರೀತಿಯಲ್ಲಿ ಇಲ್ಲ. ಚಿತ್ರದಲ್ಲಿರುವ ಟ್ರಿಗರ್ ಫಿಶ್ ಗೆ ಮನುಷ್ಯರ ಮೂತಿಯನ್ನು ಪೋಟೋಶಾಪ್ ಮಾಡುವ ಮೂಲಕ ಬದಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.