ಕೊರೊನಾ ಕಾರಣದಿಂದ ತಮ್ಮ ಸ್ವಗೃಹದಲ್ಲಿ ಕ್ವಾರಂಟೈನ್ ಆಗಿರುವ ಬ್ರೆಜಿಲ್ ಅಧ್ಯಕ್ಷರು ಸಮಯ ಕಳೆಯಲು ಎಮು ಪಕ್ಷಿಗೆ ಆಹಾರ ನೀಡುತ್ತಿದ್ದಾಗ ಕೈ ಕಚ್ಚಿಸಿಕೊಂಡಿದ್ದಾರೆ.
ಬ್ರೆಜಿಲ್ ಅಧ್ಯಕ್ಷ ಬೊಲ್ಸೊನಾರೋಗೆ ಕಳೆದ ವಾರ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಒಂದು ವಾರದ ಬಳಿಕ ಅವರು ತಮ್ಮ ಅರಮನೆ ಆವರಣದಲ್ಲಿ ಅಡ್ಡಾಡುವಾಗ, ಎಮು ಪಕ್ಷಿಗೆ ಆಹಾರ ನೀಡಲು ಮುಂದಾದರು.
ಈ ವೇಳೆ ಒಂದು ಪಕ್ಷಿ ಅವರ ಕೈ ಕಚ್ಚಿದೆ. ತಕ್ಷಣವೇ ನೋವಿಂದ ಕೈ ಹಿಂದಕ್ಕೆ ಎಳೆದುಕೊಂಡಿದ್ದಾರೆ. ಅವರು ಎಮು ಪಕ್ಷಿಗೆ ಆಹಾರ ನೀಡುವ ಫೋಟೋ ವೈರಲ್ ಆಗಿದೆ. ಇದೆ ವೇಳೆ ತಮ್ಮ ಸಂಕಷ್ಟದ ಸಮಯದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅವರು, ತಾವು ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
https://twitter.com/pedromuriel/status/1282859463863672834?ref_src=twsrc%5Etfw%7Ctwcamp%5Etweetembed%7Ctwterm%5E1282859463863672834%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fbrazilian-president-jair-bolsonaro-bit-by-emu-like-bird-during-covid-19-quarantine-2718337.html