ಕೊರೊನಾ ಸೋಲಿಸುವಲ್ಲಿ ದೆಹಲಿ ಸರ್ಕಾರ ಯಶಸ್ವಿ ಪ್ರಯಾಣ ಮುಂದುವರೆಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 2,000 ಕ್ಕಿಂತ ಕಡಿಮೆಯಿದೆ. ದೆಹಲಿ ಸರ್ಕಾರದ ಪ್ರಕಾರ ಗುರುವಾರ 1,652 ಹೊಸ ಪ್ರಕರಣಗಳು ಬಂದಿದ್ದು, 58 ಜನರು ಸಾವನ್ನಪ್ಪಿದ್ದಾರೆ.
ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳ ಸಂಖ್ಯೆ ಸಕ್ರಿಯ ಪ್ರಕರಣಗಳಿಗಿಂತ 5 ಪಟ್ಟು ಹೆಚ್ಚಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಕಾರ, ಜುಲೈ 15 ರವರೆಗೆ ದೆಹಲಿಯಲ್ಲಿ 2.5 ಲಕ್ಷ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿತ್ತು. ಆದ್ರೆ ಕೇವಲ 1.15 ಲಕ್ಷ ಪ್ರಕರಣಗಳು ಮಾತ್ರ ದಾಖಲಾಗಿವೆ.
ಕೇಂದ್ರ ಸರ್ಕಾರವು ದೆಹಲಿಯ ಪರಿಸ್ಥಿತಿ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಕೊರೊನಾ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಅದ್ರಲ್ಲಿ ಯಶಸ್ವಿಯಾಗ್ತಿದೆ. ಜುಲೈ 2 ಮತ್ತು 15 ರ ನಡುವೆ ದೆಹಲಿಯ ಸಕಾರಾತ್ಮಕ ದರವು ಶೇಕಡಾ 15ರಷ್ಟಿದೆ. ಈ ಮೊದಲು ಇದು ಜೂನ್ 19 ಮತ್ತು ಜುಲೈ 2 ರ ನಡುವೆ ಶೇಕಡಾ 16.40ರಷ್ಟಿತ್ತು.