ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತ್ತಾರೆ. ಅಭಿಮಾನಿಗಳು ತಮ್ಮ ಅಭಿಮಾನ ತೋರಿಸಲು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕ್ಲಬ್ ಕೂಡ ರಚಿಸುತ್ತಾರೆ. ಅದ್ರಲ್ಲಿ ತಮ್ಮ ನೆಚ್ಚಿನ ಕಲಾವಿದರ ಫೋಟೋ, ವಿಡಿಯೋ ಹಂಚಿಕೊಳ್ತಾರೆ. ಆದ್ರೆ ಇಲ್ಲೂ ಕೆಲವೊಮ್ಮೆ ಅಪರಾಧಗಳು ನಡೆಯುತ್ತವೆ.
ಬಾಲಿವುಡ್ ನಟಿ ಕೊಯೆನಾ ಮಿತ್ರಾ ಜೊತೆ ಇಂಥ ಘಟನೆ ನಡೆದಿದೆ. ಆಕೆ ಹೆಸರಿನಲ್ಲಿ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳಲಾಗ್ತಿದೆಯಂತೆ. ನಟಿಯೇ ಇದನ್ನು ಸ್ಪಷ್ಟಪಡಿಸಿದ್ದಾಳೆ. ನಟಿ ಹೆಸರು ಹಾಳು ಮಾಡ್ತಿರುವ ಇಬ್ಬರ ಹೆಸರನ್ನು ಕೂಡ ಕೊಯೆನಾ ಹೇಳಿದ್ದಾಳೆ.
ಕೊಯೆನಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಒಂದರ ನಂತರ ಒಂದರಂತೆ ಎರಡು ಟ್ವೀಟ್‌ಗಳನ್ನು ಹಂಚಿಕೊಂಡಿದ್ದಾಳೆ. ಅದರಲ್ಲಿ ಅವರು ಮೊದಲ ಟ್ವೀಟ್‌ನಲ್ಲಿ ಎರಡು ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿದ್ದಾರೆ. ಈ ಸ್ಕ್ರೀನ್ ಶಾಟ್‌ಗಳಲ್ಲಿ ಯೂಟ್ಯೂಬ್ ಖಾತೆ ಮತ್ತು ಇನ್ನೊಂದು ಇನ್‌ಸ್ಟ್ರಾಗ್ರಾಮ್ ಖಾತೆ ಇದೆ. ಯೂಟ್ಯೂಬ್ ಖಾತೆಯಲ್ಲಿ ಕೊಯೆನಾ ಮಿತ್ರಾ ಹೆಸರು ಮತ್ತು ಫೋಟೋ ಇದೆ.
ಈ ಖಾತೆಯೊಂದಿಗೆ ಅಶ್ಲೀಲ ವೀಡಿಯೊಗಳನ್ನು ಹಂಚಿಕೊಳ್ಳಲಾಗಿದೆ. ಈ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡ ಕೊಯೆನಾ ಇದು ಫ್ಯಾನ್ ಕ್ಲಬ್ ಎಂದರೆ ನೀವು ಭಾವಿಸುತ್ತೀರಾ? ನನ್ನ ಹೆಸರಿನಲ್ಲಿ ಅಭಿಮಾನಿಗಳು ಮೋಸದ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದಿದ್ದಾಳೆ.