ಇಂಟರ್ನೆಟ್ ಮಹಿಮೆ ನೋಡಿ..! ಜನರಿಗೆ ತಮ್ಮ ಪ್ರತಿಭೆಗಳನ್ನು ತೋರಲು ವೇದಿಕೆಯೇ ಬೇಕು ಎಂದಿಲ್ಲ. ಹಾಗೇ ಒಂದು ವಿಡಿಯೋ ಮಾಡಿ, ಅದರಲ್ಲಿ ನಿಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ತೋರಿದರೆ ಸಾಕು, ರಾತ್ರಿ ಬೆಳಗಾಗೋದ್ರೊಳಗೆ ಸ್ಟಾರ್ ಆಗಲೂಬಹುದು.
ಬರೀ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ಸಹ ಸೆಲೆಬ್ರಿಟಿಗಳಾಗಲು ವಿಪುಲ ಅವಕಾಶವಿದೆ ಸಾಮಾಜಿಕ ಜಾಲತಾಣಗಳಲ್ಲಿ. ನಾಯಿ, ಬೆಕ್ಕು, ಕೋತಿ, ಹಸುಗಳೆಲ್ಲಾ ತಮ್ಮ ಪೆಕ್ಯೂಲಿಯರ್ ನಡೆಗಳ ಮೂಲಕ ಫೇಮಸ್ ಆಗಿರೋದನ್ನು ಕಂಡಿದ್ದೇವೆ.
ಇದೀಗ ನಾಲ್ಕು ವರ್ಷದ ‘Nunchuck Bear’ ಹೆಸರಿನ ಕರಡಿಯೊಂದು ನಿಂಜಾ ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕರಾಟೆಯಲ್ಲಿ ಬಳಸುವ ಈ ವಸ್ತುವನ್ನು ಕರಡಿ ಬಲೇ ಮಜವಾಗಿ ಹಿಡಿದುಕೊಂಡು, ಮನುಷ್ಯರಿಗೇ ಪೈಪೋಟಿ ಕೊಡುವ ಮಟ್ಟಿಗೆ ಕುಣಿಯುತ್ತಿರುವುದನ್ನು ಕಂಡು ನೆಟ್ಟಿಗರು ಎಂಜಾಯ್ ಮಾಡುತ್ತಿದ್ದಾರೆ.