2011 ರಿಂದ ಔಷಧಿಗಳ ಮೇಲೆ ಕ್ಯೂಆರ್ ಕೋಡ್ ಹೇರಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ಆದ್ರೀಗ ಮತ್ತೆ ಚರ್ಚೆ ಶುರುವಾಗಿದೆ. ಶೀಘ್ರದಲ್ಲೇ ಎಲ್ಲಾ ಔಷಧಿಗಳ ಮೇಲೆ ಕ್ಯೂಆರ್ ಕೋಡ್‌ಗಳನ್ನು ನೋಡಬಹುದು.
ಈ ಕ್ಯೂಆರ್ ಕೋಡ್ ಅನ್ವಯಿಸಿದ ಮೇಲೆ ಯಾವುದು ನಕಲಿ ಔಷಧಿ, ಯಾವುದು ಅಸಲಿ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಸುದ್ದಿಯ ಪ್ರಕಾರ, ಸಮಿತಿಯೊಂದನ್ನು ರಚಿಸಲಾಗಿದೆ. ಅದು ಅದರ ರೂಪರೇಖೆಯನ್ನು ಸಿದ್ಧಪಡಿಸಲಿದೆ.
ಕ್ಯೂಆರ್ ಕೋಡ್, ನಕಲಿ, ಅಸಲಿ ಔಷಧಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಿಗಳಿಗೆ ಬೇಗ ಬ್ರೇಕ್ ಬೀಳಲಿದೆ.