alex Certify ಭಾರೀ ಮಳೆ ನಡುವೆ ಬೀದಿ ನಾಯಿಗೆ ಅಂಗಡಿಯಲ್ಲಿ ಆಶ್ರಯ ಕೊಟ್ಟ ಮಾಲೀಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಮಳೆ ನಡುವೆ ಬೀದಿ ನಾಯಿಗೆ ಅಂಗಡಿಯಲ್ಲಿ ಆಶ್ರಯ ಕೊಟ್ಟ ಮಾಲೀಕ

ಭಾರೀ ಮಳೆಯಲ್ಲಿ ನೆನೆಯುತ್ತಿದ್ದ ಬೀದಿ ನಾಯೊಂದನ್ನು ತನ್ನ ಅಂಗಡಿಯೊಳಗೆ ಬರಲು ಬಾಗಿಲು ತೆರೆದ ವರ್ತಕರೊಬ್ಬರ ಮಾನವೀಯತೆಯನ್ನು ನೆಟ್ಟಿಗ ಸಮುದಾಯ ಕೊಂಡಾಡುತ್ತಿದೆ.

’Street dogs of Bombay’ ಎಂಬ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ತನ್ನ ಅಂಗಡಿಯ ಬಾಗಿಲಿನ ಬಳಿ ಇದ್ದ ಮೆಟ್ಟಿಲ ಬಳಿ ಮಳೆಯಲ್ಲಿ ನೆಂದು ನಡುಗುತ್ತಾ ಕುಳಿತಿದ್ದ ನಾಯಿಗೆ ಬಾಗಿಲು ತೆರೆಯುವ ಮಾಲೀಕ, ಅದನ್ನು ಒಳಬರಲು ಹೇಳುತ್ತಾನೆ.

ಮೊದ ಮೊದಲು ಒಳ ಹೋಗಲು ಅಂಜಿಕೆ ತೋರುವ ನಾಯಿ, ಬಳಿಕ ಬಾಲ ಅಲ್ಲಾಡಿಸಿಕೊಂಡು ಒಳಗೆ ಬರುತ್ತದೆ. ಅಂಗಡಿ ಮಾಲೀಕನ ಈ ಔದಾರ್ಯಕ್ಕೆ ಕಾಮೆಂಟ್ ಸೆಕ್ಷನ್‌ ನಲ್ಲಿ ಭಾರೀ ಶ್ಲಾಘನೆಗಳು ವ್ಯಕ್ತವಾಗಿವೆ.

https://www.instagram.com/p/CCnPgilHozm/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...