ದುಬೈನ ಆಸ್ಪತ್ರೆಗೆ ದಾಖಲಾಗಿದ್ದ ತೆಲಂಗಾಣದ ಕೊರೊನಾ ರೋಗಿಯ 1 ಕೋಟಿ 52 ಲಕ್ಷ ರೂಪಾಯಿ ಬಿಲ್ ಮನ್ನಾ ಮಾಡಲಾಗಿದೆ. ಇಷ್ಟೇ ಅಲ್ಲ ಉಚಿತ ಟಿಕೆಟ್ ಮತ್ತು ಹತ್ತು ಸಾವಿರ ರೂಪಾಯಿಗಳನ್ನು ನೀಡಿ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ.
ತೆಲಂಗಾಣದ ಜಗಿತಾಲ್ ಮೂಲದ ಒಡ್ನಾಲಾ ರಾಜೇಶ್ ಏಪ್ರಿಲ್ 23 ರಂದು ದುಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 80 ದಿನಗಳ ಚಿಕಿತ್ಸೆಯ ನಂತರ ರಾಜೇಶ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರ ಆಸ್ಪತ್ರೆ ಬಿಲ್ 1 ಕೋಟಿ 52 ಲಕ್ಷ ರೂಪಾಯಿ ಆಗಿತ್ತು.
ದುಬೈನ ಗಲ್ಫ್ ವರ್ಕರ್ಸ್ ಪ್ರೊಟೆಕ್ಷನ್ ಸೊಸೈಟಿಯ ಅಧ್ಯಕ್ಷ ಗುಂಡೇಲಿ ನರಸಿಂಹ, ರಾಜೇಶ್ ಬಗ್ಗೆ ದುಬೈನ ಭಾರತೀಯ ರಾಯಭಾರಿ ಅಧಿಕಾರಿಗೆ ತಿಳಿಸಿದ್ದಾರೆ. ಅಲ್ಲದೆ ದುಬೈನ ಆಸ್ಪತ್ರೆ ಆಡಳಿತಕ್ಕೆ ಪತ್ರ ಬರೆಯಲಾಗಿದೆ. ಬಿಲ್ ಮನ್ನಾ ಮಾಡುವಂತೆ ಕೋರಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ ಆಸ್ಪತ್ರೆ ರಾಜೇಶ್ ಬಿಲ್ ಮನ್ನಾ ಮಾಡಿದೆ.
ಒಡ್ನಾಲಾ ರಾಜೇಶ್ ಮತ್ತು ಸಹಚರರಿಗೆ ಪಾಕೆಟ್ ಖರ್ಚಿಗೆಂದು 10 ಸಾವಿರ ನೀಡಿ, ಉಚಿತ ಟಿಕೆಟ್ ನೀಡಿ ಊರಿಗೆ ಕಳುಹಿಸಿದ್ದಾರೆ. ರಾಜೇಶ್ ತವರು ತಲುಪಿದ್ದು 14 ದಿನಗಳ ಕ್ವಾರಂಟೈನ್ ನಲ್ಲಿದ್ದಾರೆ.