ಹೆದ್ದಾರಿಗೆ ಬಂದು ಕುಳಿತ ಹುಲಿ ನೋಡಿ ಕಂಗಾಲಾದ ವಾಹನ ಸವಾರರು 16-07-2020 12:57PM IST / No Comments / Posted In: Latest News, India ಹುಲಿಯೊಂದು ಹೆದ್ದಾರಿಗೆ ಬಂದು ಸಂಚಾರ ತಡೆದ ಘಟನೆ ಮಧ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ. ಸಿವನಿ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಮೀ ದೂರದಲ್ಲಿ ಪಿಂಚ್ ರಾಷ್ಟ್ರೀಯ ಉದ್ಯಾನದ ಬಫರ್ ಜೋನ್ ನಲ್ಲಿ ಘಟನೆ ನಡೆದಿದ್ದು, ಕಾರಿನೊಳಗಿಂದ ಮಾಡಿದ ವಿಡಿಯೋವನ್ನು ಅನುರಾಗ್ ದ್ವಾರಿ ಎಂಬುವವರು ಟ್ವೀಟ್ ಮಾಡಿದ್ದಾರೆ. ನಿರ್ಮಾಣ ಕಾಮಗಾರಿ ನಡೆಯುತ್ತಿದ್ದುದರಿಂದ ಸಂಜೆಯ ಹೊತ್ತಿಗೆ ಹೆದ್ದಾರಿಯಲ್ಲಿ ವಾಹನ ಸಂಚಾರ ಜಾಸ್ತಿ ಇತ್ತು. ಆಗ ಕಾಡಿನಿಂದ ಬಂದ ದೊಡ್ಡ ಕೆಂಪು ಪಟ್ಟೆ ಹುಲಿ ರಸ್ತೆಯ ಮಧ್ಯದಲ್ಲಿ ಮಲಗಿ, ಬಾಯಿಂದ ನಾಲಿಗೆ ಹೊರ ತೆಗೆದು ಉಸಿರಾಡುತ್ತ ಶಾಂತ ಚಿತ್ತವಾಗಿ ವಿಶ್ರಾಂತಿ ಪಡೆಯಲಾರಂಭಿಸಿತು. ಆದರೆ, ಹೆದ್ದಾರಿಯ ಇಕ್ಕೆಲಗಳಲ್ಲಿ ನಿಂತ ವಾಹನ ಸವಾರರಿಗೆ ಟೆನ್ಶನ್ ಶುರುವಾಗಿತ್ತು. ಸುಮಾರು ಹೊತ್ತಿನವರೆಗೂ ವಾಹನ ಸಂಚಾರ ಬಂದಾಗಿತ್ತು. ಒಂದು ಪೊಲೀಸ್ ತಂಡ ಹಾಗೂ ನಂತರ ಅರಣ್ಯ ಇಲಾಖೆಯ ತಂಡ ಸ್ಥಳಕ್ಕಾಗಮಿಸಿ ಹುಲಿಯನ್ನು ಹಿಡಿಯುವ ಅಥವಾ ಓಡಿಸುವ ತಯಾರಿಯಲ್ಲಿತ್ತು. ಆದರೆ, ಹುಲಿ ತಾನಾಗಿಯೇ ಎದ್ದು ಕಾಡಿನತ್ತ ಹೆಜ್ಜೆ ಹಾಕಿದೆ. ವಿಡಿಯೋವನ್ನು 30 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಹುಲಿ ಜನಸಂಚಾರದ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಹಕ್ಕೆ ಸಿಲುಕಿದ ಹುಲಿ ರೈತರೊಬ್ಬರ ಡೈರಿಯೊಳಗೆ ಬಂದು ರಕ್ಷಣ ಪಡೆದಿತ್ತು. सिवनी जिले में जब जंगल के राजा सड़क पर आकर दहाड़ मारने लगे! @GargiRawat @ndtvindia @ndtv @RandeepHooda @hridayeshjoshi @SrBachchan अमिताभ बच्चन #tiger @OfficeofUT #SaveBirdsServeNature #welcometoindia pic.twitter.com/DWwYvHGdRV — Anurag Dwary (@Anurag_Dwary) July 14, 2020 सिवनी जिले में जब जंगल के राजा सड़क पर आकर दहाड़ मारने लगे! @GargiRawat @ndtvindia @ndtv @RandeepHooda @hridayeshjoshi @SrBachchan अमिताभ बच्चन #tiger @OfficeofUT #SaveBirdsServeNature #welcometoindia pic.twitter.com/DWwYvHGdRV — Anurag Dwary (@Anurag_Dwary) July 14, 2020