alex Certify ರೆಕ್ಕೆ ಬಡಿಯದೆ ನೂರಾರು ಕಿ.ಮೀ. ಹಾರುತ್ತೆ ಈ ಹಕ್ಕಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಕ್ಕೆ ಬಡಿಯದೆ ನೂರಾರು ಕಿ.ಮೀ. ಹಾರುತ್ತೆ ಈ ಹಕ್ಕಿ…!

ಜಗತ್ತಿನ ಅತಿ ದೊಡ್ಡ ಹಾಗೂ ಅತಿ ವೇಗವಾಗಿ ಎತ್ತರಕ್ಕೆ ಹಾರಬಲ್ಲ ಪಕ್ಷಿಯೊಂದು ಪತ್ತೆಯಾಗಿದೆ.

ವಿಜ್ಞಾನಿಗಳ ತಂಡವೊಂದು ಈ ದೈತ್ಯ ಪಕ್ಷಿಯ ಹಾರಾಟದ ಸಮಯ, ವೇಗ, ಎತ್ತರಗಳನ್ನು ಅಳತೆ ಮಾಡಿದ್ದು, ಇದುವರೆಗೆ ಪತ್ತೆಯಾದ ಎಲ್ಲ ಪಕ್ಷಿಗಳಿಗಿಂತ ಇದು ಅತಿ ದೊಡ್ಡದು ಎಂದು ವ್ಯಾಖ್ಯಾನಿಸಿದ್ದಾರೆ.

ಇದರ ರೆಕ್ಕೆ 10 ಅಡಿ ಇದ್ದು, ಆಸ್ಟ್ರೇಲಿಯಾ ಪ್ರದೇಶದಲ್ಲಿ ಕಂಡುಬರುವ ಏಂಡಿಯನ್ ಕೋಂಡರ್ ಹೆಸರಿನ ಹದ್ದಿನ ತೂಕವು 33 ಪೌಂಡ್ ಇದೆ.

ಇಂತಹ 8 ಹದ್ದುಗಳನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದು, ಕೆಲ ಹದ್ದುಗಳು ಒಮ್ಮೆ ರೆಕ್ಕೆ ಬಡಿದುಕೊಂಡು ಮೇಲಕ್ಕೆ ಹಾರಿದರೆ, ಆ ನಂತರ ಗಂಟೆಗಟ್ಟಲೆ ರೆಕ್ಕೆ ಬಡಿಯದೆಯೇ ಹಾರಾಡುತ್ತಲೇ ಇರಬಲ್ಲದು. ಇನ್ನು ಕೆಲವು ಗರಿಷ್ಟ ಒಂದು ಬಾರಿ ಮಾತ್ರ ರೆಕ್ಕೆ ಬಡಿದದ್ದುಂಟು. ಕೆಲವು ಐದಾರು ಗಂಟೆಗಳ ಕಾಲ ರೆಕ್ಕೆ ಬಡಿಯದೆಯೇ ಚಲಿಸಿದ್ದೂ ಇದೆ. ಇಷ್ಟು ಸಮಯದಲ್ಲಿ 100 ಮೈಲಿ ಅಂದರೆ, ಬರೋಬ್ಬರಿ 160 ಕಿ.ಮೀ. ದೂರವನ್ನು ಕ್ರಮಿಸಬಲ್ಲವು ಎಂದು ವಿಜ್ಞಾನಿ ಡೇವಿಡ್ ವಿವರಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...