ಕೊರೊನಾಕ್ಕೆ ಇನ್ನೂ ಸೂಕ್ತ ಲಸಿಕೆ ಬಂದಿಲ್ಲ. ಪ್ರಯೋಗಗಳು ನಡೆಯುತ್ತಿರುವ ಮಧ್ಯೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಲಹೆ ನೀಡಲಾಗ್ತಿದೆ. ಆಯುರ್ವೇದ ವಿಧಾನಗಳಿಂದ ರೋಗನಿರೋಧಕ ಶಕ್ತಿಯನ್ನು ಬಲವಾಗಿಡಲು ಆಯುಷ್ ಸಚಿವಾಲಯವು ಕೆಲವು ಸಲಹೆಗಳನ್ನು ನೀಡಿದೆ. ಇವುಗಳನ್ನು ತಪ್ಪದೆ ಪಾಲಿಸಿದಲ್ಲಿ ಕೊರೊನಾವನ್ನು ಸುಲಭವಾಗಿ ಎದುರಿಸಬಹುದು.
ಹಗಲಿನಲ್ಲಿ ಸಾಧ್ಯವಾದಷ್ಟು ಬಿಸಿ ನೀರು ಕುಡಿಯಿರಿ. ಪ್ರತಿದಿನ ಕನಿಷ್ಠ 9 ರಿಂದ 10 ಲೋಟ ನೀರು ಕುಡಿಯಿರಿ.
ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಯೋಗ ಮಾಡಿ.
ಆಹಾರದಲ್ಲಿ ಹೆಚ್ಚು ಹೆಚ್ಚು ಜೀರಿಗೆ, ಅರಿಶಿನ, ಬೆಳ್ಳುಳ್ಳಿ, ಕೊತ್ತಂಬರಿ ಬಳಸಿ.
ಚವಾನ್‌ಪ್ರಶ್ ತೆಗೆದುಕೊಳ್ಳುವುದು ಮುಖ್ಯ. ಪ್ರತಿದಿನ ಒಂದು ಟೀಸ್ಪೂನ್ ತಿನ್ನಿರಿ. ಮಧುಮೇಹ ರೋಗಿಗಳು ಇದನ್ನು ಸೇವಿಸಬಹುದು.
ತುಳಸಿ, ದಾಲ್ಚಿನ್ನಿ, ಕರಿಮೆಣಸು ಮತ್ತು ಶುಂಠಿ ಮತ್ತು ಒಣ ದ್ರಾಕ್ಷಿಯನ್ನು ಕುದಿಸಿ ಕಷಾಯ ಮಾಡಿ ಪ್ರತಿದಿನ ಕುಡಿಯಿರಿ.
ರಾತ್ರಿ ಮಲಗುವ ಮೊದಲು ಹಾಲಿನೊಂದಿಗೆ ಬೆರೆಸಿದ ಅರಿಶಿನವನ್ನು ಕುಡಿಯಿರಿ.