
ಆನೆಮರಿ ನೋಡುವುದೇ ಒಂದು ಸೊಗಸು. ಅವುಗಳ ಮುಗ್ಧವಾದ ತುಂಟಾಟ, ಓಡಾಟ, ತರಲೆ ಎಂತವರ ಹೃದಯವನ್ನೂ ಕರಗಿಸಿ ಬಿಡುತ್ತದೆ.
ಇದೀಗ ಮೈಸೂರು ಮೃಗಾಲಯದಲ್ಲಿ ವೇದಾವತಿ ಹೆಸರಿನ ಪುಟ್ಟ ಆನೆಮರಿಯ ಆಟೋಟದ ವಿಡಿಯೋ ವೈರಲ್ ಆಗಿದೆ.
ರಕ್ಷಿಸಲ್ಪಟ್ಟ ಆನೆ ಮರಿಯನ್ನು ಮೃಗಾಲಯದ ಸಿಬ್ಬಂದಿ ಸೋಮ ಅವರು ನಿರ್ವಹಿಸುತ್ತಿದ್ದಾರೆ. ಅದನ್ನು ಮೃಗಾಲಯಕ್ಕೆ ಕರೆತಂದಾಗ ಕೇವಲ 89 ಕಿಲೋ ಗ್ರಾಂ ತೂಕವಿದ್ದು ಎರಡು ತಿಂಗಳ ಅವಧಿಯಲ್ಲಿ 20 ಕಿಲೋಗ್ರಾಂ ತೂಕ ಹೆಚ್ಚಿಸಿಕೊಂಡಿದೆ.
ಸೋಮ ಅವರ ಜೊತೆ ವೇದಾವತಿಯು ವಾಕ್ ಮಾಡುವ ವಿಡಿಯೋ ಗಮನ ಸೆಳೆಯುತ್ತಿದೆ. ವೇದಾವತಿಗೆ ತಾನು ಯಾವ ರೀತಿಯ ಆಹಾರ ಕೊಡುತ್ತಿದ್ದೇನೆ, ನಿತ್ಯ ವಾಕಿಂಗ್ ಯಾವ ರೀತಿ ಮಾಡುತ್ತಿದ್ದೇವೆ ಎಂಬಿತ್ಯಾದಿ ವಿಷಯಗಳನ್ನು ಸೋಮ ಅವರು ಹಂಚಿಕೊಂಡಿರುವ ವಿಡಿಯೋ ಈಗ ನೆಟ್ಟಿಗರ ಗಮನಸೆಳೆದಿದೆ.