ದೆಹಲಿಯ ನಿವಾಸಿ ವಿಕಾಸ್ ಎಂಬ 33 ವರ್ಷದ ವ್ಯಕ್ತಿ ತಮ್ಮ ಹೆಸರನ್ನು ಜೇಮ್ಸ್ ಬಾಂಡ್ ಎಂದು ಬದಲಾಯಿಸಿಕೊಂಡಿದ್ದಾರೆ.
ಈ ವಿಚಾರ ಈಗ ಬಯಲಾಗಿದ್ದು ಹೆಸರು ಬದಲಾಯಿಸಿಕೊಂಡಿರುವುದನ್ನು ವಿಕಾಸ್ ಖಚಿತಪಡಿಸಿದ್ದಾರೆ. ಅವರ ನೆಚ್ಚಿನ ಬಾಂಡ್, ಡೇನಿಯಲ್ ಐಷಾರಾಮಿ ಕಾರುಗಳಲ್ಲಿ ತಿರುಗುತ್ತಿದ್ದರೆ ವಿಕಾಸ್ ಹಳೆ ಬೈಕ್ ನಲ್ಲಿ ತಿರುಗುತ್ತಿದ್ದಾರೆ.
ನಟ ಮತ್ತು ಈ ಅಭಿಮಾನಿಯ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಈ ಹಿಂದೆ ನಟನ ಹಿಂದೆ ವಿಶ್ವಾದ್ಯಂತ ಸಾಕಷ್ಟು ಮಂದಿ ಮಹಿಳಾ ಅಭಿಮಾನಿಗಳು ಬಿದ್ದಿದ್ದರು. ಆದರೆ ದೆಹಲಿ ಬಾಂಡ್ ಪತ್ನಿಯ ಅಸಮಾಧಾನಕ್ಕೆ ತುತ್ತಾಗಿದ್ದಾರೆ.
ನಾನು ಹೆಸರು ಬದಲಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಆಕೆ ಆಘಾತಕ್ಕೊಳಗಾಗಿ, ಸಿಟ್ಟಿನಿಂದ ಕೆಕ್ಕರಿಸಿ ನೋಡಿದಳು. ರೂಮಿನಿಂದ ಹೊರ ನಡೆದಳು. ನನ್ನೊಂದಿಗೆ ಎರಡು ದಿನದ ಬಳಿಕ ಮಾತನಾಡಿದಳು ಎಂದು ದೆಹಲಿಯ ಈ ಬಾಂಡ್ ಹೇಳಿಕೊಂಡಿದ್ದಾರೆ.
ಇದೀಗ ಪತ್ನಿಗೆ ತನ್ನ ಗಂಡ ಟ್ರೋಲ್ ಆಗುತ್ತಾನೆ ಎಂಬುದೇ ಚಿಂತೆಯಾಗಿದೆ. ಹೆಸರು ಬದಲಾವಣೆ ವಿಚಾರವನ್ನು ಆತ ಅನೇಕರಲ್ಲಿ ಚರ್ಚಿಸಿದ್ದಾರೆ. ಆದರೆ ಯಾರೂ ಗಂಭೀರವಾಗಿ ಭಾವಿಸಿರಲಿಲ್ಲ. ಆದರೆ ಈಗ ಅಚ್ಚರಿಗೊಂಡಿದ್ದಾರೆ.