alex Certify ಅಪರಾಧಿಗಳ ಮನೆಗೆ ಬ್ಯಾಂಡ್‌ ಸಮೇತ ಬಂದ ಪೊಲೀಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರಾಧಿಗಳ ಮನೆಗೆ ಬ್ಯಾಂಡ್‌ ಸಮೇತ ಬಂದ ಪೊಲೀಸ್…!

ಕ್ರಿಮಿನಲ್ ‌ಗಳನ್ನು ಬೆನ್ನತ್ತುವ ಪೊಲೀಸರು ದಿನೇ ದಿನೇ ಅನೇಕ ರೀತಿಯ ಹೊಸ ಬಗೆಯ ತಂತ್ರಗಳನ್ನು ಅಳವಡಿಸಿಕೊಂಡು ಅವರನ್ನು ಹಿಡಿಯಲು ಬಲೆ ಬೀಸುವುದನ್ನು ಕೇಳಿದ್ದೇವೆ.

ಇತ್ತೀಚೆಗೆ ಬಿಹಾರದ ಭಾಗಲ್ಪುರ ಪೊಲೀಸರು ತಲೆತಪ್ಪಿಸಿಕೊಂಡಿರುವ ಕ್ರಿಮಿನಲ್‌ಗಳನ್ನು ಬೇಟೆಯಾಡಲೆಂದು ಮ್ಯೂಸಿಕ್ ಬ್ಯಾಂಡ್ ಜೊತೆಗೆ ಅವರ ಮನೆಗಳತ್ತ ತೆರಳಿ, ಬಂದು ಶರಣಾಗತರಾಗಲು ಸೂಚಿಸಿದ್ದಾರೆ. ಸಂಗೀತದ ಮೂಲಕ ಸಮನ್ಸ್ ನೀಡಲಾದ ಈ ಕ್ರಿಮಿನಲ್‌ಗಳು ಅನೇಕ ಪ್ರಕರಣಗಳಲ್ಲಿ ಬೇಕಾಗಿದ್ದಾರೆ.

ಈ ಕ್ರಿಮಿನಲ್‌ಗಳಿಗೆ ಅವರ ಕುಟುಂಬಗಳ ಮೂಲಕ ವಾರ್ನಿಂಗ್ ನೀಡಿದ್ದು, ಬೇಗ ಬಂದು ತಾವಾಗಿ ತಾವೇ ಶರಣಾಗದೇ ಇದ್ದಲ್ಲಿ, ಅವರುಗಳ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸ್ಟೇಷನ್ ಅಧಿಕಾರಿ ಪವನ್ ಕುಮಾರ್‌ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...