ನೋಡಲು ಥೇಟ್ ತರಕಾರಿಯಂತಿದೆ, ಕತ್ತರಿಸಿದರೆ ಬಾಯಲ್ಲಿ ನೀರೂರಿಸುತ್ತದೆ.
ಇಂಥಾ ಚಿತ್ರ-ವಿಚಿತ್ರಗಳನ್ನು ಹೆಕ್ಕಿ ತೆಗೆಯುವಲ್ಲಿ ನೆಟ್ಟಿಗರೂ ಎತ್ತಿದ ಕೈ.
ಕಲಾವಿದ ಬಾಣಸಿಗನೊಬ್ಬ ಕೇಕ್ ನ್ನು ಬದನೆಕಾಯಿ, ಕೋಸು, ಈರುಳ್ಳಿ, ಸೇಬು, ದ್ರಾಕ್ಷಿ, ನೀರಿನ ಕೆಟಲ್ ಹೀಗೆ ಮನೆಯ ನಿತ್ಯಬಳಕೆ ವಸ್ತುವಿನಂತೆಯೇ ತಯಾರಿಸಿದ್ದಾನೆ.
ಆ ವಸ್ತುವಿನದೇ ಬಣ್ಣ, ನೆರಿಗೆ, ಪದರ ಎಲ್ಲವೂ ಎದ್ದುಕಾಣುತ್ತದೆ.
ನೋಡಿದ ತಕ್ಷಣ ಅದು ಕೇಕ್ ಎಂದೆನಿಸುವುದೇ ಇಲ್ಲ. ಆದರೆ, ಆತ ಅವುಗಳನ್ನು ಚಾಕುವಿನಿಂದ ಕತ್ತರಿಸುತ್ತಾ ಬಂದಂತೆ ಬಾಯಲ್ಲಿ ನೀರೂರಿಸುತ್ತದೆ. ಅಷ್ಟು ಚಂದನೆಯ ವಿನ್ಯಾಸ, ನಿಜದ ವಸ್ತುಗಳ ತಲೆಮೇಲೆ ಹೊಡೆದಂತೆ ಕಾಣುವ ಕೇಕ್ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕಮೆಂಟ್ ಗಳೂ ಅಷ್ಟೇ ಮಜಾ ನೀಡುವಂತಿದೆ.
https://twitter.com/NatalieSideserf/status/1281409527116701696?ref_src=twsrc%5Etfw%7Ctwcamp%5Etweetembed%7Ctwterm%5E1281409527116701696%7Ctwgr%5E&ref_url=https%3A%2F%2Fwww.indiatoday.in%2Ftrending-news%2Fstory%2Fvideo-of-chef-cutting-cakes-looking-like-real-objects-goes-viral-twitter-has-hilarious-reactions-1699926-2020-07-13