ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಒಂದು ತಿಂಗಳು ಕಳೆದಿದೆ. ಬಾಲಿವುಡ್, ಸುಶಾಂತ್ ಸ್ನೇಹಿತರು ಹಾಗೂ ಸುಶಾಂತ್ ಅಭಿಮಾನಿಗಳಿಗೆ ಈಗ್ಲೂ ಸುಶಾಂತ್ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಈ ಮಧ್ಯೆ ಸುಶಾಂತ್ ಅಗಲಿ ಒಂದು ತಿಂಗಳಾಗಿದ್ದು, ಅನೇಕರು ಇಂದು ಸುಶಾಂತ್ ನೆನಪು ಮಾಡಿಕೊಂಡಿದ್ದಾರೆ.
ಇವರಲ್ಲಿ ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಸೇರಿದ್ದಾರೆ. ಸುಶಾಂತ್ ಸಾವಿನ ನಂತ್ರ ಅಂಕಿತಾ ದುಃಖದಲ್ಲಿದ್ದಾರೆ. ತಮ್ಮನ್ನು ಸಂಭಾಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸುಶಾಂತ್ ಸಾವಿನ ನಂತ್ರ ಸಾಮಾಜಿಕ ಜಾಲತಾಣದಿಂದ ದೂರವಿದ್ದ ಅಂಕಿತಾ ಇಂದು ಒಂದು ಪೋಸ್ಟ್ ಹಾಕಿದ್ದಾರೆ.
ದೇವರ ಮನೆಯಲ್ಲಿ ದೀಪ ಹಚ್ಚಿದ್ದು, ಅದ್ರ ಬಳಿ ಬಿಳಿ ಹೂಗಳಿವೆ. ಈ ಫೋಟೋಕ್ಕೆ ಚೈಲ್ಡ್ ಆಫ್ ಗಾಡ್ ಎಂದು ಶೀರ್ಷಿಕೆ ಹಾಕಿದ್ದಾರೆ. ಅಂಕಿತಾ ಈ ಫೋಸ್ಟ್ ಅನೇಕರ ಕಣ್ಣಲ್ಲಿ ನೀರು ತರಿಸಿದೆ.
https://www.instagram.com/p/CCm2bflBzpN/?utm_source=ig_embed