ಈಗ ಎದುರಿಸುತ್ತಿರುವ ಕೊರೋನಾ ಸೋಂಕು ಏನೇನೂ ಅಲ್ಲ. ಚಳಿಗಾಲದಲ್ಲಿ ಕೊರೋನಾ ಸೋಂಕಿನ ಭೀಕರತೆ ಹೆಚ್ಚಾಗಲಿದೆ.
ಇಂಗ್ಲೆಂಡ್ ನಲ್ಲಿ ಚಳಿಗಾಲದಲ್ಲಿ 1.20 ಲಕ್ಷ ಜನ ಕೊರೋನಾ ಸೋಂಕಿನಿಂದ ಸಾಯಬಹುದು ಎಂದು ಅಕಾಡೆಮಿ ಆಫ್ ಮೆಡಿಕಲ್ ಸೈನ್ಸ್ ತಜ್ಞರಿಂದ ಎಚ್ಚರಿಕೆ ನೀಡಲಾಗಿದೆ. ತಜ್ಞರಾದ ಸ್ಟೀಫನ್ ಹೋಲ್ಗೇಟ್ ನೀಡಿರುವ ಮಾಹಿತಿಯಂತೆ ಕೊರೋನಾ ಎರಡನೇ ಅಲೆ ಚಳಿಗಾಲದಲ್ಲಿ ಇಂಗ್ಲೆಂಡ್ ನಲ್ಲಿ 1.20 ಲಕ್ಷ ಜನರ ಸಾವಿಗೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೋಸ್ ನೀಡಿರುವ ಮಾಹಿತಿಯಂತೆ, ಹಲವು ದೇಶಗಳಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಸಮಗ್ರ ಕಾರ್ಯತಂತ್ರ ರೂಪಿಸಿದರೆ ಮಾತ್ರ ನಿಯಂತ್ರಣ ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಸಮಗ್ರ ಕಾರ್ಯತಂತ್ರ ರೂಪಿಸಿ ಕೊರೋನಾ ನಿಯಂತ್ರಿಸಬೇಕಿದೆ ಎಂದು ಹೇಳಿದ್ದಾರೆ. ಈಗಾಗಲೇ ಕೆಟ್ಟ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಭವಿಷ್ಯದಲ್ಲಿ ನಮ್ಮ ಪರಿಸ್ಥಿತಿ ಇನ್ನೂ ಕೆಟ್ಟದಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.