ನೃತ್ಯ, ಸಂಗೀತ, ಫೋಟೋಗ್ರಫಿ ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಹವ್ಯಾಸ ಇರುತ್ತದೆ. ಕೆಲವರು ತಮ್ಮ ಹವ್ಯಾಸವನ್ನು ಅತಿಯಾಗಿ ಪ್ರೀತಿಸುತ್ತಾರೆ. ಈ ವ್ಯಕ್ತಿ ಬಾಲ್ಯದ ತಮ್ಮ ಹವ್ಯಾಸವನ್ನು ತಮ್ಮ ಬದುಕಿನ ಪ್ರತಿ ಹಂತದಲ್ಲೂ ಅಳವಡಿಸಿಕೊಂಡಿದ್ದಾರೆ.
ಹೌದು, ಬೆಳಗಾವಿಯ ರವಿ ಹೊಂಗಲ್ ಅವರಿಗೆ ಫೋಟೋಗ್ರಫಿ ಬಾಲ್ಯದ ಹವ್ಯಾಸ. ಗ್ರಾಮೀಣ ಬದುಕಿನ ಚಿತ್ರಣವನ್ನು ತಮ್ಮ ಪೆಂಟೆಕ್ಸ್ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದರು.
ದೊಡ್ಡವರಾದ ನಂತರ ಅದಕ್ಕೆ ಸಂಬಂಧಿಸಿದ ಉದ್ಯಮವನ್ನೂ ಪ್ರಾರಂಭಿಸಿದರು. ಅವರಿಗೆ ತಮ್ಮ ಹವ್ಯಾಸದ ಮೇಲೆ ಎಷ್ಟು ಪ್ರೀತಿ ಎಂದರೆ ತಮ್ಮ ಮೂವರು ಮಕ್ಕಳಿಗೆ ಪ್ರಸಿದ್ಧ ಕ್ಯಾಮರಾ ಕಂಪನಿಗಳ ಹೆಸರಿಟ್ಟಿದ್ದಾರೆ.
ಎಪ್ಸನ್, ಕೆನಾನ್ ಹಾಗೂ ನಿಕಾನ್ ಎಂದು ಹೆಸರಿಟ್ಟಿದ್ದಾರೆ. ಇಷ್ಟಕ್ಕೇ ಮುಗಿದಿಲ್ಲ ಅವರ ಕ್ಯಾಮರಾ ಪ್ರೀತಿ. ತಮ್ಮ ಮನೆಯನ್ನು ಕ್ಯಾಮರಾ ಮಾದರಿಯಲ್ಲೇ ನಿರ್ಮಾಣ ಮಾಡಿದ್ದಾರೆ. ಕ್ಯಾಮರಾ ಲೆನ್ಸ್ ನ್ನು ಕಿಟಕಿಯಾಗಿ ಮಾಡಿದ್ದಾರೆ. ಅಷ್ಟೇ ಅಲ್ಲ ಆ ಮನೆಗೆ ‘ಕ್ಲಿಕ್’ ಎಂದು ಹೆಸರಿಟ್ಟಿದ್ದಾರೆ.
ಲಾಫಿಂಗ್ ಸ್ಕ್ವಿಡ್ ಟ್ವಿಟರ್ ಪೇಜ್ನಲ್ಲಿ ಅವರ ಮನೆಯ ಚಿತ್ರ, ಮಕ್ಕಳ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಲಾಗಿದೆ. ಫೋಟೋಗ್ರಫಿಯ ಮೇಲೆ ಅವರಿಗಿರುವ ಪ್ರೀತಿಗೆ ಎಂಥವರೂ ಸಲಾಂ ಎನ್ನಲೇಬೇಕು.