ಹೆರಿಗೆ ನಂತ್ರ ಮಹಿಳೆಯರಲ್ಲಿ ಬೊಜ್ಜು ಕಾಡುವುದು ಸಾಮಾನ್ಯ. ಹೆರಿಗೆ ನಂತ್ರ ವಿಶೇಷವಾಗಿ ಹೊಟ್ಟೆ ಉಬ್ಬಿಕೊಳ್ಳುತ್ತದೆ. ಕೈ, ಕಾಲುಗಳು ಕೂಡ ಊದಿಕೊಂಡಿರುತ್ತವೆ. ಹೆರಿಗೆ ನಂತ್ರ ತೂಕ ಇಳಿಸಿಕೊಳ್ಳಲು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಹೆರಿಗೆಯಾದ ಕೆಲ ದಿನಗಳಲ್ಲಿಯೇ ವ್ಯಾಯಾಮ ಶುರು ಮಾಡದೆ ಹೋದಲ್ಲಿ ಹೊಟ್ಟೆ ಸೇರಿದಂತೆ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ.
ಹೆರಿಗೆ ನಂತ್ರ ಕೊಬ್ಬು ಕಡಿಮೆ ಮಾಡಿಕೊಳ್ಳದೆ ಹೋದಲ್ಲಿ ಮುಂದೆ ಅನೇಕ ಸಮಸ್ಯೆ ಎದುರಾಗುತ್ತದೆ. ದೇಹದ ಹಿಮೋಗ್ಲೋಬಿನ್ ಮಟ್ಟವನ್ನು ಕಡಿಮೆ ಮಾಡಬೇಕು. ಹಾಗಂತ ಹೆರಿಗೆಯಾದ ತಕ್ಷಣ ಹೆಚ್ಚಿನ ವ್ಯಾಯಾಮ ಮಾಡುವುದು ಅಪಾಯಕಾರಿ. ಶಸ್ತ್ರಚಿಕಿತ್ಸೆಯಾಗಿದ್ದರೆ ಹೆಚ್ಚಿನ ವ್ಯಾಯಾಮ ಮಾಡಬಾರದು. ನಿಧಾನವಾಗಿ ವ್ಯಾಯಾಮ ಶುರು ಮಾಡಬೇಕು. ಮೊದಲು ಹಗುರವಾದ ವ್ಯಾಯಾಮ ಮಾಡಬೇಕು.
ಪ್ರತಿದಿನ ಕನಿಷ್ಠ ಅರ್ಧ ಗಂಟೆಯವರೆಗೆ ಹಗ್ಗ ಜಿಗಿತ ಮತ್ತು ಪುಷ್ ಅಪ್ ಮಾಡಬೇಕು. ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ. ಮೊದಲ ಐದು ನಿಮಿಷಗಳ ಕಾಲ ಹಗ್ಗದಾಟವಾಡಿ ನಂತ್ರ ಪುಷ್ ಅಪ್ಗಳನ್ನು ಮಾಡಿ. ಈ ಅನುಕ್ರಮವನ್ನು ಮತ್ತೆ ಮತ್ತೆ ಅರ್ಧ ಗಂಟೆಯವರೆಗೆ ಪುನರಾವರ್ತಿಸಿ.
ವ್ಯಾಯಾಮದ ಜೊತೆಗೆ ಕುಳಿತುಕೊಳ್ಳುವ ಭಂಗಿ, ನಡಿಗೆ ಬಗ್ಗೆ ಗಮನ ಕೊಡಿ. ಸರಿಯಾಗಿ ಕುಳಿತುಕೊಳ್ಳದಿದ್ದರೂ, ಹೊಟ್ಟೆ ಹೊರಬರಲು ಪ್ರಾರಂಭಿಸುತ್ತದೆ. ಕುಳಿತಾಗಲೆಲ್ಲಾ ಹಿಂಭಾಗವನ್ನು ನೇರವಾಗಿ ಇಟ್ಟುಕೊಳ್ಳಿ. ಎಂದೂ ತಲೆಬಾಗಬೇಡಿ.
ಸಂಜೆ ಆಹಾರವನ್ನು ಸೇವಿಸಿದ ನಂತರ ಕನಿಷ್ಠ 40 ನಿಮಿಷಗಳ ಕಾಲ ಬ್ರಿಕ್ಸ್ ವಾಕ್ ಮಾಡಿ. ಇದ್ರಿಂದ ಬೆನ್ನು ನೋವು ಕಡಿಮೆಯಾಗುತ್ತದೆ. ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಹೆರಿಗೆ ನಂತ್ರ ವೈದ್ಯರು ನೀಡುವ ಟಿಪ್ಸ್ ಪಾಲಿಸಿ ವ್ಯಾಯಾಮ ಮಾಡುವುದು ಒಳ್ಳೆಯದು.