ಬಾಲಿವುಡ್‌ನಲ್ಲಿ ಒಂದರ ಮೇಲೊಂದರಂತೆ ಆಘಾತಗಳು ಆಗುತ್ತಲೇ ಇವೆ. ಒಂದು ಸಾವಿನ ಸುದ್ದಿ ಅರಗಿಸಿಕೊಳ್ಳುವ ಮುನ್ನವೇ ಮತ್ತೊಂದರಂತೆ ಸಾವಿನ ಸುದ್ದಿಗಳು ಕಿವಿಗೆ ಬಡಿಯುತ್ತಿವೆ. ಇದೀಗ ಸಿನಿಮಾ, ಮಾಡೆಲ್, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ನಟಿಸಿರುವ ನಟಿ ದಿವ್ಯಾ ಚೌಕಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ.
ನಟಿ ಸಾವಿಗೆ ಅನೇಕ ಅಭಿಮಾನಿಗಳು, ಸೆಲಿಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಈ ನಟಿಯ ಪೋಸ್ಟ್ ಒಂದು ವೈರಲ್ ಆಗುವುದರ ಜೊತೆಗೆ ಅನೇಕ ಮಂದಿಯಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತಿದೆ. ದಿವ್ಯಾ ಚೌಕಿ ಸಾವಿಗೂ 15 ಗಂಟೆಗಳ ಮುನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ.
ಈ ಬಗ್ಗೆ ಬರೆದುಕೊಂಡಿರುವ ನಟಿ, ನಾನು ಹೇಳಬೇಕೆಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಆಗುತ್ತಿಲ್ಲ. ಅನೇಕ ತಿಂಗಳುಗಳ ನಂತರ ಈ ವಿಚಾರವನ್ನು ನಿಮಗೆ ಹೇಳುತ್ತಿದ್ದೇನೆ. ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಸಾವಿನ ಹಾಸಿಗೆಯಲ್ಲಿದ್ದೇನೆ. ನಾನು ಬಲಶಾಲಿ. ಮುಂದಿನ ಜನ್ಮದಲ್ಲಿ ನಿಮ್ಮನ್ನೆಲ್ಲಾ ಭೇಟಿಯಾಗುತ್ತೇನೆ. ದುಃಖವಿಲ್ಲದ ಮತ್ತೊಂದು ಜೀವನ ನನಗಿರಲಿ. ದಯವಿಟ್ಟು ಯಾರು ಪ್ರಶ್ನಿಸಬೇಡಿ. ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.