ಕಂಡಾದ ಗ್ರಾಮವೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸಮಾಧಿ ಮಾಡಿದ್ದ ಯುವತಿ ಶವ ಹೊರತೆಗೆದಾಗ ಸತ್ಯ ಹೊರಬಿದ್ದಿದೆ. ಯುವತಿ ತಂದೆಯೇ ಆಕೆಯನ್ನು ಹತ್ಯೆಗೈದು, ಆತ್ಮಹತ್ಯೆ ಪಟ್ಟ ಕಟ್ಟಿದ್ದಾನೆ ಎಂಬುದು ಗೊತ್ತಾಗಿದೆ.
ಕೆಲ ದಿನಗಳ ಹಿಂದೆ ಯುವತಿ ತಂದೆ ಪೊಲೀಸರಿಗೆ ದೂರು ನೀಡಿದ್ದ. ಮಗಳ ಮೇಲೆ ಅತ್ಯಾಚಾರ ನಡೆದಿದ್ದು, ಆತ್ಮಹತ್ಯೆಗೆ ಪ್ರೇರೇಪಿಸಲಾಗ್ತಿದೆ ಎಂದು ಆರೋಪ ಮಾಡಿದ್ದ. ನಂತ್ರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅಂತ್ಯಸಂಸ್ಕಾರ ನಡೆಸಿದ್ದ. ಅನುಮಾನಗೊಂಡ ಪೊಲೀಸರು ಶವ ಹೊರಗೆ ತೆಗೆದಿದ್ದಾರೆ. ಆಗ ಯುವತಿ ಗರ್ಭಿಣಿಯಾಗಿದ್ದಳು ಎಂಬುದು ಗೊತ್ತಾಗಿದೆ.
ತಂದೆ ಬಂಧಿಸಿರುವ ಪೊಲೀಸರು ಯುವತಿ ಗರ್ಭಕ್ಕೆ ಕಾರಣರ್ಯಾರು ಎಂಬುದನ್ನು ಪತ್ತೆ ಮಾಡ್ತಿದೆ. ಡಿಎನ್ಎ ಪರೀಕ್ಷೆ ಕೂಡ ನಡೆಯುತ್ತಿದೆ.