alex Certify ಜೆಂಗಾ ಬ್ಲಾಕ್ ಬ್ಯಾಲೆನ್ಸಿಂಗ್ ಮೂಲಕ ಗಿನ್ನಿಸ್ ದಾಖಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಂಗಾ ಬ್ಲಾಕ್ ಬ್ಯಾಲೆನ್ಸಿಂಗ್ ಮೂಲಕ ಗಿನ್ನಿಸ್ ದಾಖಲೆ…!

ಈ ಕೋವಿಡ್-19 ಲಾಕ್ ‌ಡೌನ್ ಅವಧಿಯಲ್ಲಿ ಅನೇಕ ಗಿನ್ನೆಸ್ ದಾಖಲೆಗಳು ಸೃಷ್ಟಿಯಾಗಿವೆ. ಮನೆಗಳಲ್ಲೇ ಇರಬೇಕಾಗಿ ಬಂದಿರುವ ಜನರು ದಿನಕ್ಕೊಂದು ಹೊಸ ಬಗೆಯ ಕ್ರಿಯೇಟಿವ್ ಕೆಲಸಗಳನ್ನು ಮಾಡಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡು ಬಂದಿದ್ದಾರೆ.

ಅರಿಝೋನಾದ ವ್ಯಕ್ತಿಯೊಬ್ಬರು ಈ ಬಾರಿ 485 ಜೆಂಗಾ ಬ್ಲಾಕ್ ‌ಗಳನ್ನು ಬಳಸಿಕೊಂಡು ಹೊಸ ಗಿನ್ನಿಸ್ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಈ ಮೂಲಕ ತಮ್ಮದೇ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ ಟಾಯ್ ಸ್ಟಾರ್‌ ವಲಿಯಾಂಟಿ.

ಪಿರಮಿಡ್‌ ಒಂದನ್ನು ಉಲ್ಟಾ ಇಟ್ಟಂತೆ ಕಾಣುವ ಈ ರಚನೆಯನ್ನು ಇವರು ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕಟ್ಟಿದ್ದಾರೆ. ಇವರ ಸ್ಪೆಷಾಲಿಟಿ ಎಂದರೆ, ಭೌತ ವಿಜ್ಞಾನ ತಜ್ಞರಿಗೇ ಅಚ್ಚರಿಯಾಗುವ ಮಟ್ಟದಲ್ಲಿ ಬ್ಯಾಲೆನ್ಸಿಂಗ್ ಮಾಡುವ ರಚನೆಗಳನ್ನು ನಿರ್ಮಿಸುವುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...