alex Certify ಮನಕಲಕುತ್ತೆ ವೀರ ಯೋಧನ ʼಹುಟ್ಟುಹಬ್ಬʼದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ವೀರ ಯೋಧನ ʼಹುಟ್ಟುಹಬ್ಬʼದ ವಿಡಿಯೋ

ಮುಂಚೂಣಿ ನೆಲೆಗಳಲ್ಲಿ ಕರ್ತವ್ಯ ಸಲ್ಲಿಸುವ ಸಂದರ್ಭದಲ್ಲಿ ಸೈನಿಕರು ಯಾವೆಲ್ಲಾ ಮಟ್ಟದಲ್ಲಿ ಶ್ರಮ ಪಡುತ್ತಾರೆ ಎಂದು ತೋರುವ ಅನೇಕ ವಿಡಿಯೋಗಳನ್ನು ಕಂಡಿದ್ದೇವೆ. ಇದೀಗ, ಯೋಧರು ’ಮಂಜಿನ ಕೇಕ್‌’ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುವ ವಿಡಿಯೋವೊಂದು ವೈರಲ್ ಆಗಿದೆ.

ಈ ಆಚರಣೆಯ 14 ಸೆಕೆಂಡ್ ‌ಗಳ ವಿಡಿಯೋ ಕ್ಲಿಪ್‌ ಅನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಶೇರ್‌ ಮಾಡಿಕೊಂಡಿದ್ದಾರೆ.

“ಯೋಧರೊಬ್ಬರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚೀಸ್ ‌ಕೇಕ್‌ ಮರೆತುಬಿಡಿ, ಮಂಜಿನ ಕೇಕ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಹೇಗೆಂದು ಸೈನಿಕನಿಗೆ ಗೊತ್ತಿದೆ. ಯೋಧರ ತ್ಯಾಗ ಹಾಗೂ ಕೆಚ್ಚೆದೆಯನ್ನು ವರ್ಣಿಸಲು ಯಾವುದೇ ಪದಗಳು ಸಾಲವು” ಎಂದು ಸೆಹ್ವಾಗ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

https://twitter.com/shri_kush/status/1282185820938502144?ref_src=twsrc%5Etfw%7Ctwcamp%5Etweetembed%7Ctwterm%5E1282185820938502144%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fvideo-shows-soldier-celebrating-birthday-with-snow-cake-netizens-salute-indian-armys-indomitable-spirit%2F620378

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...