ಮಕ್ಕಳು ಪೌಷ್ಟಿಕಾಂಶ ಇರುವ ಆಹಾರ ತಿನ್ನುವುದಿಲ್ಲ. ಕೇವಲ ಬಾಯಿ ರುಚಿ ಕೊಡುವ ಕುರುಕಲು ತಿಂಡಿ ತಿನ್ನುತ್ತಾರೆ. ದಿನನಿತ್ಯ ಮಗುವಿನ ಬೆಳವಣಿಗೆಗೆ ಪೋಷಕಾಂಶಗಳ ಹೆಚ್ಚಿನ ಅವಶ್ಯಕತೆ ಇದೆ. ಈ ಪುಡಿ ಅದಕ್ಕೆಲ್ಲ ಪರಿಹಾರವಾಗಬಲ್ಲದು.
ಪಿಸ್ತಾ, ಬಾದಾಮಿ, ಗೋಡಂಬಿ ಪ್ರತ್ಯೇಕವಾಗಿ ಹುರಿದಿಡಿ. ಕೇಸರಿಯನ್ನು ಸಹ ಹುರಿದುಕೊಳ್ಳಿ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ.
ಇದಕ್ಕೆ ತುರಿದ ಜಾಯಿಕಾಯಿ, ಅರಿಷಿಣವನ್ನು ಸೇರಿಸಿ ರುಬ್ಬಿ. ಈಗ ಪೌಷ್ಟಿಕಾಂಶಭರಿತ ಪುಡಿ ತಯಾರಾಗುತ್ತದೆ.
ಇದನ್ನು ಒಂದು ಡಬ್ಬದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಪುಡಿಯನ್ನು ಒಂದು ತಿಂಗಳ ಕಾಲ ಬಳಸಬಹುದು. ಇದನ್ನು ಫ್ರಿಜ್ ನಲ್ಲಿಯೂ ಇಡಬಹುದು. ಮಕ್ಕಳು ತಿನ್ನುವ ಆಹಾರದಲ್ಲಿ ಸೇರಿಸಿ ಕೊಡುವುದರಿಂದ ಮಕ್ಕಳಿಗೆ ಪೌಷ್ಟಿಕಾಂಶ ದೊರೆಯುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.