ದಕ್ಷಿಣ ಆಫ್ರಿಕಾದ ಟೈಗರ್ ಕ್ಯಾನ್ಯನ್ ವನ್ಯಜೀವಿ ಮತ್ತು ಸಫಾರಿ ಉದ್ಯಾನದಲ್ಲಿ ಎರಡು ಹುಲಿಗಳ ನಡುವೆ ನಡೆದ ಭೀಕರ ರಣಕಾಳಗದ ವಿಡಿಯೋ ಈಗ ವೈರಲ್ ಆಗಿದೆ.
2013ರಲ್ಲಿ ಈ ವಿಡಿಯೋವನ್ನು ಹೆಲೆನಾ ವಾಟ್ ಕಿಮ್ಸ್ ಅವರು ಚಿತ್ರೀಕರಿಸಿದ್ದರು. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಧಾ ರಾಮನ್ ಅವರು ಈಗ ಅದನ್ನ ಟ್ವೀಟಿಸಿದ್ದಾರೆ.
ಎರಡು ಹುಲಿಗಳು ಪ್ರಾಬಲ್ಯ ಸಾಧಿಸಲು ಪೈಪೋಟಿ ನಡೆಸುವ ವಿಡಿಯೋವನ್ನು ನೋಡಿ, ಇಂತಹ ಕಾಳಗವನ್ನು ಹಿಂದೆ ನೋಡಿರಲಿಲ್ಲ. ಇದು ಯಾವುದೇ ರೆಸ್ಲಿಂಗ್ ಗಿಂತ ಕಡಿಮೆ ಇಲ್ಲ ಎಂದು ಐಎಫ್ಎಸ್ ಅಧಿಕಾರಿ ಸುಧಾ ವ್ಯಾಖ್ಯಾನಿಸಿದ್ದಾರೆ.
ಸಾಮಾನ್ಯವಾಗಿ ಹುಲಿಗಳು ತಮ್ಮ ಟೆರಿಟರಿಯಲ್ಲಿ ಹೊಸ ಹುಲಿ ಪ್ರವೇಶವಾದಾಗ ಇಷ್ಟೊಂದು ಭೀಕರ ಕಾಳಗ ನಡೆಸುತ್ತದೆ, ಇಲ್ಲವಾದರೆ ಹೆಣ್ಣು ಹುಲಿ ಮೇಲಿನ ಹಕ್ಕಿಗಾಗಿಯೂ ಕಾದಾಟ ನಡೆಸುತ್ತದೆ ಎಂಬ ಮಾತುಗಳಿವೆ.