ಅಮೆರಿಕಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಯುಎಸ್ನಲ್ಲಿ 70,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೇ ಮೊದಲ ಬಾರಿ ಇಷ್ಟೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಇದು ದಾಖಲೆಯಾಗಿದೆ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶಗಳ ಪ್ರಕಾರ, ಯುಎಸ್ನಲ್ಲಿ ಇದುವರೆಗೆ 3,183,856 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶಗಳು ವಿಶ್ವಾದ್ಯಂತ ಇದುವರೆಗೆ 12,461,962 ಜನರಿಗೆ ಮಾರಕ ಕೊರೊನಾ ವೈರಸ್ ಕಾಣಿಸಿಕೊಂಡಿದೆ ಎಂದಿದೆ. ಈ ಅಪಾಯಕಾರಿ ವೈರಸ್ನಿಂದ ಈವರೆಗೆ ವಿಶ್ವದಲ್ಲಿ 559,481 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚಿಕಿತ್ಸೆಯ ನಂತರ 6,835,987 ರೋಗಿಗಳು ಗುಣಮುಖರಾಗಿದ್ದಾರೆ.
ಬ್ರಿಟನ್ ಗೆ ಬರುವ ವಿದೇಶಿಗರನ್ನು ಕ್ವಾರಂಟೈನ್ ಮಾಡಲು ಸರ್ಕಾರ ನಿರ್ಧರಿಸಿದೆ. ಫ್ರಾನ್ಸ್, ಇಟಲಿ, ಬೆಲ್ಜಿಯಂ, ಜರ್ಮನಿ ಮತ್ತು ಇತರ ಹಲವಾರು ದೇಶಗಳಿಂದ ಬ್ರಿಟನ್ಗೆ ಆಗಮಿಸುವ ಜನರು 14 ದಿನಗಳವರೆಗೆ ಕ್ವಾರಂಟೈನ್ ಆಗ್ಬೇಕು.