ಪಾಕಿಸ್ತಾನ ಸರ್ಕಾರಕ್ಕೆ ಅಮೆರಿಕಾ ದೊಡ್ಡ ಶಾಕ್ ನೀಡಿದೆ. ಪಾಕಿಸ್ತಾನದಿಂದ ಅಮೆರಿಕಾಕ್ಕೆ ಸಂಚಾರ ನಡೆಸುತ್ತಿದ್ದ ಎಲ್ಲ ವಿಶೇಷ ವಿಮಾನಗಳ ಮೇಲೆ ನಿಷೇಧ ಹೇರಲಾಗಿದ್ದು, ಹೀಗಾಗಿ ಪಾಕಿಸ್ತಾನದ ವಿಮಾನಗಳು ಅಮೆರಿಕಾ ಪ್ರವೇಶಿಸುವಂತಿಲ್ಲ.
ಪಾಕ್ ಏರ್ಲೈನ್ಸ್ ನಲ್ಲಿ ಸೂಕ್ತ ಪದವಿ ಹಾಗೂ ತರಬೇತಿ ಇಲ್ಲದ ಪೈಲೆಟ್ ಗಳು ಕಾರ್ಯ ನಿರ್ವಹಿಸುತ್ತಿರುವುದು ಬಹಿರಂಗವಾದ ಹಿನ್ನೆಲೆಯಲ್ಲಿ ಅಮೆರಿಕಾ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ಕಳೆದ ಮೇ ತಿಂಗಳಿನಲ್ಲಿ ಪಾಕ್ ಏರ್ಲೈನ್ಸ್ ಗೆ ಸೇರಿದ ವಿಮಾನವೊಂದು ಕರಾಚಿಯಲ್ಲಿ ಜನವಸತಿ ಪ್ರದೇಶದ ಮೇಲೆ ಪತನಗೊಂಡಿತ್ತು. ಈ ಸಂದರ್ಭದಲ್ಲಿ ನೂರಾರು ಮಂದಿ ಸಾವಿಗೀಡಾಗಿದ್ದು, ಬಳಿಕ ಪೈಲೆಟ್ ಗಳ ಸಾಮರ್ಥ್ಯದ ಕುರಿತು ಪರೀಕ್ಷೆ ನಡೆಸಲಾಗಿತ್ತು.
ಸಾಮರ್ಥ್ಯ ಪರೀಕ್ಷೆಯ ವೇಳೆ ಬಹಳಷ್ಟು ಮಂದಿ ಪೈಲೆಟ್ ಗಳು ಸುಳ್ಳು ದಾಖಲೆಗಳನ್ನು ನೀಡಿ ನೇಮಕಗೊಂಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಪಾಕ್ ಏರ್ಲೈನ್ಸ್ ವಿಮಾನಗಳ ಪ್ರವೇಶಕ್ಕೆ ಅಮೆರಿಕಾ ನಿಷೇಧ ಹೇರಿದೆ.