ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಡುಗೆ ಮನೆಯಲ್ಲಿ ತಕ್ಕಡಿ ಇಟ್ಟುಕೊಂಡಿರುವ ರಹಸ್ಯವನ್ನು ಪತ್ನಿ ಅನುಷ್ಕಾ ಶರ್ಮಾ ಬಯಲಿಗೆಳೆದಿದ್ದಾರೆ.
ಆಹಾರವನ್ನು ತೂಕ ಮಾಡಿ ಹಿತಮಿತವಾಗಿ ಸೇವಿಸುತ್ತಿರುವ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಆಟದಿಂದ ಮಾತ್ರವಲ್ಲದೇ, ಫಿಟ್ನೆಸ್ ಮತ್ತು ಆಹಾರ ಪದ್ಧತಿಯಿಂದ ಕ್ರೀಡಾಪಟುಗಳಿಗೆ ಮಾದರಿಯಾಗಿರುವ ವಿರಾಟ್ ಕೊಹ್ಲಿ ಡಯಟ್ ಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎನ್ನುವುದನ್ನು ಅನುಷ್ಕಾ ಶರ್ಮಾ ಬಹಿರಂಗಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಅಡುಗೆ ಮನೆಯಲ್ಲಿರುವ ತಕ್ಕಡಿಯಲ್ಲಿ ಅವಲಕ್ಕಿಯನ್ನು ತೂಕಮಾಡಿ ಸೇವಿಸುತ್ತಿರುವ ವಿಡಿಯೋವನ್ನು ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.