alex Certify ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿ: ವಾರೆನ್ ಬಫೆಟ್ ಹಿಂದಿಕ್ಕಿದ ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿ: ವಾರೆನ್ ಬಫೆಟ್ ಹಿಂದಿಕ್ಕಿದ ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ 8 ನೇ ಸ್ಥಾನಕ್ಕೆ ಏರಿದ್ದಾರೆ.

ಶ್ರೀಮಂತರ ಪಟ್ಟಿಯಲ್ಲಿ ವಾರನ್ ಬಫೆಟ್ ಅವರನ್ನು ಹಿಂದಿಕ್ಕಿದ್ದಾರೆ. ವಾರೆನ್ ಬಫೆಟ್ 67.9 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದು ಈಗ 9ನೇ ಸ್ಥಾನದಲ್ಲಿದ್ದಾರೆ. 68.3 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಮುಖೇಶ್ ಅಂಬಾನಿ 8ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಟೆಲಿಕಾಂ ತೈಲ, ಸಂಸ್ಕರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಡಿಜಿಟಲ್ ಘಟಕಕ್ಕೆ ಇತ್ತೀಚೆಗೆ ಸಿಲ್ವರ್ ಲೇಕ್, ಫೇಸ್ಬುಕ್ ಸೇರಿದಂತೆ ಹಲವು ಕಂಪನಿಗಳಿಂದ 15 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಹೂಡಿಕೆ ಮಾಡಲಾಗಿದೆ. ಸಂಪತ್ತಿನಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಬ್ಲೂಮ್ ಬರ್ಗ್ ಬಿಲಿಯನೇರ್ ಗಳ ಸೂಚ್ಯಂಕದ ಪ್ರಕಾರ ಮುಕೇಶ್ ಅಂಬಾನಿ 8ನೇ ಸ್ಥಾನಕ್ಕೆ ಏರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...