ಕೊರೊನಾ ಒಂದು ಕಡೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ಮುಂದುವರೆದಿದೆ. ಲಸಿಕೆ ಕಂಡುಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅನೇಕ ದೇಶಗಳು ಕೊರೊನಾ ಲಸಿಕೆ ಪರೀಕ್ಷೆ ನಡೆಸುತ್ತಿವೆ. ಗಮಲೇಯ ಸೈಂಟಿಫಿಕ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಕೂಡ ರಷ್ಯಾದ ರಕ್ಷಣಾ ಸಚಿವಾಲಯದೊಂದಿಗೆ ಜಂಟಿಯಾಗಿ ಲಸಿಕೆ ಕಂಡು ಹಿಡಿಯುತ್ತಿದೆ. ಕೋವಿಡ್-19 ಲಸಿಕೆ ಅಂತಿಮ ಹಂತಕ್ಕೆ ತಲುಪಿದೆ ಎಂಬ ಖುಷಿ ಸುದ್ದಿ ಸಿಕ್ಕಿದೆ.
ಜೂನ್ 18ರಿಂದಲೇ ಲಸಿಕೆ ಪರೀಕ್ಷೆ ಶುರುವಾಗಿದೆ. ಕ್ಲಿನಿಕಲ್ ಪ್ರಯೋಗಗಳ ಅಂತಿಮ ಹಂತವನ್ನು ಪ್ರಾರಂಭಿಸಿದ್ದು, ಇದ್ರ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಪರಿಣಾಮ ಬೀರಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಕೊರೊನಾ ಸೋಂಕು ಹೆಚ್ಚಾಗ್ತಿರುವ ಕಾರಣ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಕೂಡ ಜೋರಾಗಿದೆ. ಭಾರತದಲ್ಲೂ ಆಗಸ್ಟ್ 15ರಂದು ಲಸಿಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.