ಕೊರೊನಾ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಬಳಕೆ ಹೆಚ್ಚಾಗುತ್ತಿದೆ. ಅದೊಂದು ಸಾಮಾನ್ಯ ವಿಷಯವಾಗುತ್ತಿದೆ.
ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವುದರಿಂದ ಕಚೇರಿ, ಕುಟುಂಬ, ಗೆಳೆಯರ ನಡುವೆ ಈ ವಿಡಿಯೋ ಸಂವಾದದ ಮೂಲಕವೇ ಮೀಟಿಂಗ್ ಮತ್ತು ಚಾಟಿಂಗ್ ನಡೆಯುತ್ತಿದೆ.
ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ಮೀಟಿಂಗ್ ಮತ್ತು ಚಾಟಿಂಗ್ ನೀರಸ ಅನಿಸಬಹುದು. ಈ ವೇಳೆ ಏನು ಮಾಡುವುದು?
ಇಂಥ ಸಂದರ್ಭವನ್ನು ಅವಕಾಶವಾಗಿ ಬಳಸಿಕೊಂಡು ಫಂಡ್ ರೈಸ್ ಮಾಡುವ ಪ್ರಯತ್ನ ನಡೆದಿದೆ. ಈ ಮೂಲಕ ಸಭೆಯ ಕೊನೆಗೊಳಿಸಲು, ನಗೆಮೂಡಿಸಲು ಬಳಸಬಹುದಾಗಿದೆ. ಜೂಮ್ ನಲ್ಲಿ ಕರೆ ಮಾಡುವವರು ಈಗ ಬಕ್ವೀಟ್ ದ ಡಾಂಕಿ ಸೇವೆಗಳನ್ನು ಬಾಡಿಗೆ ಪಡೆಯಬಹುದು ಮತ್ತು ಸಭೆಗಳಲ್ಲಿ ನಗೆ ಮೂಡಿಸಬಹುದು.
ಹಲೋ ನಾವು ನಿಮ್ಮ ಸಭೆಯನ್ನು ಕ್ರಾಶ್ ಮಾಡುತ್ತಿದ್ದೇವೆ …..ನಿಮ್ಮ ಸಭೆಯನ್ನು ನಾವು ಕ್ರಾಶ್ ಮಾಡುತ್ತಿದ್ದೇವೆ…..ಇದು ಬಕ್ವೀಟ್ ಎಂದು ಅಭಯಾರಣ್ಯದ ಸ್ವಯಂಸೇವಕ ಟೀನ್ ಪ್ರೊಸ್ ಎಂಬುವರು ಜೂಮ್ ಕರೆಯಲ್ಲಿ ಬಕ್ವೀಟ್ ಪರಿಚಯಿಸುವಾಗ ಹೇಳಿದರು. ಇದು ಈಗ ಸಾಕಷ್ಟು ಸುದ್ದಿಯಾಗಿದೆ. ಅಂತರ್ಜಾಲ ತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಇನ್ನಷ್ಟು ಮಾಹಿತಿಯು ಸಿಗಬಹುದು.