ಸೊಂಪಾಗಿ ಮಲಗಿ ನಿದ್ರಿಸುತ್ತಿದ್ದಾಕೆಯನ್ನೇ ಮಂಚವೊಂದು ನುಂಗಿ ಹಾಕಿದೆ.
ಇದು ಅಚ್ಚರಿ ಎನಿಸಿದರೂ ಸತ್ಯ. ಸೋಫಾ ಬೆಡ್ ನ ಹೊದಿಕೆ ಸರಿ ಮಾಡುತ್ತಿರುವಾಗ, ತನ್ನೊಳಗೇ ಸೆಳೆದುಕೊಂಡ ಮಂಚ, ಆಕೆಯನ್ನು ನುಂಗಿದೆ.
ಆದರೆ, ಇದು ನಗೆ ತರಿಸುವಂತಿದ್ದು, ಸಾಮಾಜಿಕ ಜಾಲತಾಣದಲ್ಲಿ ನಗೆ ಹರಿಸುತ್ತಿದೆ.
ಅದೊಂದು ಮಡಿಚಿಡಬಹುದಾದ ಮಂಚವಾಗಿದ್ದು, ಅದರ ಹಾಸಿಗೆ, ಹೊದಿಕೆ ಸರಿಪಡಿಸುತ್ತಿದ್ದಾಕೆ, ಧಡ್ಡನೇ ಅದರ ಮಧ್ಯೆ ಹಾರಿ ಬಿದ್ದಿದ್ದಾಳೆ.
ತಕ್ಷಣವೇ ಮಂಚ ಮಡಿಸಿಕೊಂಡಿದ್ದು, ವಿಡಿಯೋ ಮಾಡುತ್ತಿದ್ದಾಕೆ ನಗಲಾರಂಭಿಸಿದ್ದಾಳೆ. ನಂತರ ಮಂಚದಿಂದ ಹೊರಬಂದಾಕೆಯೂ ತನ್ನ ಪಾಡು ನೆನೆದು ನಗೆಯ ಚಿಲುಮೆಯಾದಳು.
https://www.facebook.com/dani.garland.7/videos/3065710743537042/?t=4