alex Certify ಭರ್ಜರಿ ಗುಡ್ ನ್ಯೂಸ್: ಸಮಾಜ ಕಲ್ಯಾಣ ಇಲಾಖೆ ಸೇವೆ ‘ಸಕಾಲ’ದಲ್ಲೂ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ಸಮಾಜ ಕಲ್ಯಾಣ ಇಲಾಖೆ ಸೇವೆ ‘ಸಕಾಲ’ದಲ್ಲೂ ಲಭ್ಯ

ಸಮಾಜ ಕಲ್ಯಾಣ ಇಲಾಖೆಯ ಕೆಲವು ಸೇವೆಗಳು ಇನ್ನು ಮುಂದೆ ‘ಸಕಾಲ’ ಸೇವಾ ಯೋಜನೆಯಡಿ ಲಭ್ಯವಾಗಲಿದ್ದು, ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಗೆ ಸೇವಾ ಸಿಂಧು / ಸಮಾಜ ಕಲ್ಯಾಣ ಇಲಾಖೆಯ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಿ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹ ಧನ, ದೌರ್ಜನ್ಯ ಸಂತ್ರಸ್ತರುಗಳಿಗೆ ಪರಿಹಾರ, ಯುಪಿಎಸ್ಸಿ / ಕೆಪಿಎಸ್ಸಿ / ಗ್ರೂಪ್ ಎ ಮತ್ತು ಬಿ / ಆರ್.ಆರ್.ಬಿ. / ಬ್ಯಾಂಕಿಂಗ್ / ಗ್ರೂಪ್ ಸಿ / ಎಸ್.ಎಸ್.ಸಿ. ಮತ್ತು ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿ ಸೇವೆಗಳು ಸಕಾಲದಲ್ಲಿ ಲಭ್ಯವಾಗುತ್ತಿದೆ.

ಅಲ್ಲದೆ ಸಾಗರೋತ್ತರ ವಿದ್ಯಾರ್ಥಿ ವೇತನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಸೇವೆಗಳು ‘ಸಕಾಲ’ದಲ್ಲಿ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...