ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಾನ್ ಕಾರ್ಡ್, ಆಧಾರ್ ಲಿಂಕ್ ಗಡುವನ್ನು ಸರ್ಕಾರ ಮಾರ್ಚ್ 31, 2021 ಕ್ಕೆ ವಿಸ್ತರಿಸಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಆಧಾರ್ ಜೊತೆ ಪಾನ್ ಲಿಂಕ್ ಮಾಡದಿರುವವರಿಗೆ ಇದು ನೆಮ್ಮದಿ ಸುದ್ದಿಯಾಗಿದೆ.
ಈಗ ಹೊಸ ಗಡುವಿನ ಪ್ರಕಾರ, ಜನರು ಮಾರ್ಚ್ 31, 2021 ರೊಳಗೆ ತಮ್ಮ ಆಧಾರ್ ಲಿಂಕ್ ಮಾಡಬೇಕು. ಇದು ಸಾಧ್ಯವಾಗದೆ ಹೋದಲ್ಲಿ ಪಾನ್ ನಿಷ್ಕ್ರಿಯಗೊಳ್ಳಲಿದೆ. ಜನರು ದಂಡ ಪಾವತಿಸಬೇಕಾಗಬಹುದು. ಇ-ಫೈಲಿಂಗ್ ಪೋರ್ಟಲ್ http://www.incometaxindiaefiling.gov.in/home ಮೂಲಕ ನಿಮ್ಮ ಪ್ಯಾನ್ ಸಂಖ್ಯೆಯನ್ನು 12 ಅಂಕಿಯ ಆಧಾರ್ ಕಾರ್ಡ್ ಸಂಖ್ಯೆಗೆ ಲಿಂಕ್ ಮಾಡಬಹುದು.
ಇ-ಫೈಲಿಂಗ್ ವೆಬ್ಸೈಟ್ಗೆ ಹೋಗಿ, ಇಲ್ಲಿ ಎಡಭಾಗದಲ್ಲಿರುವ ಕ್ವಿಕ್ ಲಿಂಕ್ಸ್ ಟ್ಯಾಬ್ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಜೊತೆ ಪಾನ್ ನಂಬರ್ ಲಿಂಕ್ ಮಾಡಬೇಕಾಗುತ್ತದೆ.