ಕನ್ನಡ ಕಿರುತೆರೆಯಲ್ಲಿ ಇದೀಗ ಸಾಕಷ್ಟು ಧಾರಾವಾಹಿ ಹಾಗು ಸಿನಿಮಾಗಳು ಡಬ್ಬಿಂಗ್ ನಿಂದ ಪ್ರಸಾರವಾಗುವ ಮೂಲಕ ದಾಖಲೆ ಮಾಡುತ್ತಿವೆ. ಇದೀಗ ಸ್ಟಾರ್ ಸುವರ್ಣ ವಾಹಿನಿ, ನಟ ಪ್ರಭಾಸ್ ಅಭಿನಯದ ‘ಬಾಹುಬಲಿ’ ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದುಕೊಂಡಿದ್ದು, ಪ್ರಸಾರ ಮಾಡಲು ಸಜ್ಜಾಗಿದೆ.
ಇದಕ್ಕೂ ಮುಂಚೆ ಈಗಾಗಲೇ ಜಗಮಲ್ಲ, ಕಾಂಚನ 3 ಹಾಗೂ ಸೈರಾ ನರಸಿಂಹ ರೆಡ್ಡಿ ಸಿನಿಮಾಗಳು ಕನ್ನಡದಲ್ಲಿ ಪ್ರಸಾರವಾಗಿ ಅತ್ಯಧಿಕ ರೇಟಿಂಗ್ ಪಡೆದುಕೊಂಡಿವೆ. ಇದೀಗ ʼಬಾಹುಬಲಿʼ ಸಿನಿಮಾ ಕನ್ನಡದಲ್ಲಿ ಬರಲು ಸಜ್ಜಾಗಿದೆ. ಆದರೆ ಯಾವ ದಿನಾಂಕ ಎಂದು ನಿಗದಿಯಾಗಿಲ್ಲ.