ಕರಾವಳಿಯ ನೀರು ದೋಸೆಯ ರುಚಿಯನ್ನು ಸವಿದವರೇ ಬಲ್ಲರು. ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ನೀರು ದೋಸೆಯನ್ನು ಸವಿದು ಅದರ ರುಚಿಗೆ ಮಾರು ಹೋಗಿದ್ದಾರೆ. ಸ್ವತಃ ವಿರಾಟ್ ಕೊಹ್ಲಿ ಅವರೇ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಇದನ್ನು ಬರೆದುಕೊಂಡಿದ್ದಾರೆ.
ಅಂದ ಹಾಗೇ ಕೊಹ್ಲಿ ದಂಪತಿಗೆ ನೀರು ದೋಸೆಯ ಆತಿಥ್ಯ ನೀಡಿದವರು ಮುಂಬೈ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್. ಶ್ರೇಯಸ್ ಅಯ್ಯರ್ ಅವರ ತಾಯಿ ಮಂಗಳೂರು ಮೂಲದವರಾಗಿದ್ದು, ಅವರು ಮಾಡಿದ್ದ ದೋಸೆಯನ್ನು 500 ಮೀಟರ್ ದೂರದಲ್ಲಿರುವ ಕೊಹ್ಲಿ ಮನೆಗೆ ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ.
ಇದನ್ನು ಸವಿದ ಬಳಿಕ ವಿರಾಟ್ ಕೊಹ್ಲಿ, ಇಂಥ ರುಚಿಯಾದ ದೋಸೆಯನ್ನು ಬಹಳ ಸಮಯದಿಂದ ತಿಂದಿರಲಿಲ್ಲ ಎಂದಿದ್ದಾರೆ. ಜೊತೆಗೆ ಶ್ರೇಯಸ್ ಅಯ್ಯರ್ ಅವರಿಗೆ ತಮ್ಮ ಮನೆಯಲ್ಲಿ ಮಾಡಿದ ಮಶ್ರೂಮ್ ಬಿರಿಯಾನಿಯನ್ನು ಕಳುಹಿಸಿಕೊಟ್ಟಿದ್ದು, ಇದು ನಿಮಗೆ ರುಚಿಸಿರಬಹುದೆಂಬ ಭರವಸೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
https://www.instagram.com/p/CCXm6iClBRN/?utm_source=ig_embed