ಮುಂಬೈ: ಜಿಯೋ ಫೈಬರ್ ತನ್ನ ಗ್ರಾಹಕರಿಗೆ ಉತ್ತಮವಾದ ಮನರಂಜನೆಯನ್ನು ನೀಡುವ ಸಲುವಾಗಿ ಹಾಲಿವುಡ್ ಸ್ಟುಡಿಯೋ ಲಯನ್ಸ್ ಗೇಟ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಇದರಿಂದಾಗಿ ಜಿಯೋ ಫೈಬರ್ ಬಳಕೆದಾರರು ಇನ್ನು ಮುಂದೆ ಉಚಿತವಾಗಿ ಲಯನ್ಸ್ ಗೇಟ್ ಪ್ಲೇ ಸ್ಟ್ರೀಮಿಂಗ್ ಸೇವೆಯನ್ನು ಪಡೆಯಬಹುದಾಗಿದೆ.
ಜಿಯೋ ಫೈಬರ್ ಗ್ರಾಹಕರು ಈಗ ಲಯನ್ಸ್ ಗೇಟ್ ಪ್ಲೇ ಸ್ಟುಡಿಯೊದ ಒಟಿಟಿ ಪ್ಲಾಟ್‌ಫಾರ್ಮ್ ನಲ್ಲಿರುವ ಕಂಟೆಂಟ್ ಗಳನ್ನು ಜಿಯೋ ಟಿವಿ + ನಲ್ಲಿ ಪಡೆದುಕೊಳ್ಳಬಹುದಾಗಿದೆ. ಹಾಲಿವುಡ್ ಚಲನಚಿತ್ರ ಫ್ರಾಂಚೈಸಿಗಳು ಮತ್ತು ಸ್ಟುಡಿಯೊದ ಇತರ ಜನಪ್ರಿಯ ಚಲನಚಿತ್ರಗಳನ್ನು ಉಚಿತವಾಗಿ ನೋಡಬಹುದಾಗಿದೆ.
ಪ್ರಾದೇಶಿಕ ಭಾಷೆಗಳಾದ ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು ಮತ್ತು ಭೋಜ್‌ಪುರಿಗಳಲ್ಲಿ ಬಳಕೆದಾರರು ದಿ ಹಂಗರ್ ಗೇಮ್ಸ್ ಫ್ರ್ಯಾಂಚೈಸ್, ಜಾನ್ ವಿಕ್ ಸರಣಿ, ನೈವ್ಸ್, ಲಾ ಲಾ ಲ್ಯಾಂಡ್ ಮತ್ತು ದಿ ಟ್ವಿಲೈಟ್ ಸಾಗಾ ಸೇರಿದಂತೆ ಹಲವು ಕಂಟೆಂಟ್ಗಳನ್ನು ಪಡೆಯಬಹುದು.
ಜಿಯೋ ಫೈಬರ್ ಬಳಕೆದಾರರು ಉಚಿತವಾಗಿ ಲಯನ್ಸ್ ಗೇಟ್ ಪ್ಲೇ ಸಬ್ ಸ್ಕ್ರಿಪ್ಷನ್ (ಚಂದದಾರಿಕೆ)ನಲ್ಲಿ ಲಯನ್ಸ್ ಗೇಟ್ ಪ್ಲೇನಲ್ಲಿ ಲಭ್ಯವಿರುವ ಅನೇಕ ಭಾಷೆಗಳು ಮತ್ತು ಪ್ರಕಾರಗಳ ಪ್ರೀಮಿಯಂ ಕಂಟೆಂಟ್ ಅನ್ನು ಸಂಪೂರ್ಣವಾಗಿ ವೀಕ್ಷಿಸಬಹುದಾಗಿದೆ.
7,500 ಕ್ಕೂ ಹೆಚ್ಚು ವಿಭಿನ್ನ ಪ್ರೀಮಿಯಂ ಟೆಲಿವಿಷನ್ ಕಂತುಗಳು ಮತ್ತು ಸಿನಿಮಾಗಳು ಸೇರಿದಂತೆ ಸ್ಟಾರ್ಜ್ ಮೂಲ ಸರಣಿಗಳು, ಫಸ್ಟ್ ರನ್ ಚಲನಚಿತ್ರಗಳನ್ನು ಉಚಿತವಾಗಿ ನೋಡಬಹುದಾಗಿದೆ.
ಪ್ರಾದೇಶಿಕ ಸಿನೆಮಾ ಪ್ರಿಯರು ಯಾವುದೇ ಅಡೆತಡೆಯಿಲ್ಲದೆ ಹಿಂದಿ, ಕನ್ನಡ, ಮರಾಠಿ, ತಮಿಳು, ತೆಲುಗು ಮತ್ತು ಭೋಜ್‌ಪುರಿಯಲ್ಲಿ ಲಯನ್ಸ್ ಗೇಟ್ ಪ್ಲೇನ ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ಆನಂದಿಸಬಹುದು.
ಲಯನ್ಸ್ ಗೇಟ್ ಪ್ಲೇ ನಲ್ಲಿ ಲಭ್ಯವಿರುವ ಪ್ರೀಮಿಯಂ ಕಂಟೆಂಟ್ ಗಳನ್ನು ನೋಡಲು ಜಿಯೋ ಫೈಬರ್ ಬಳಕೆದಾರರು ಜಿಯೋ ಫೈಬರ್ ನ ಸಿಲ್ವರ್ ಪ್ಲಾನ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಪ್ಲಾನ್ ಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ.
ಈಗಾಗಲೇ ಜಿಯೋ ಫೈಬರ್ ಬಳಕೆ ಮಾಡುತ್ತಿರುವವರಿಗೆ ಮತ್ತು ಹೊಸದಾಗಿ ಜಿಯೋ ಫೈಬರ್ ಆಯ್ಕೆ ಮಾಡಿಕೊಳ್ಳುವವರಿಗೂ ಈ ಲಯನ್ಸ್ ಗೇಟ್ ಪ್ಲೇನ ಪ್ರೀಮಿಯಂ ಕಂಟೆಂಟ್ ಗಳು ಉಚಿತವಾಗಿ ದೊರೆಯಲಿದೆ.
ಆದರೆ ಇದಕ್ಕಾಗಿ ಸಿಲ್ವರ್ ಮಲ್ಟಿ ಮಂತ್ (ಬಹು-ತಿಂಗಳ) ರಿಚಾರ್ಜ್ ಮಾಡಿಸಿಕೊಳ್ಳಬೇಕು ಇಲ್ಲವೇ ಅದಕ್ಕಿಂತ ಹೆಚ್ಚಿನ ಮೌಲ್ಯದ ಪ್ಲಾನ್ ಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಸಿಲ್ವರ್ ಮಾಸಿಕ ಯೋಜನೆಯಲ್ಲಿ ಹೊಸ ಜಿಯೋ ಫೈಬರ್ ಬಳಕೆದಾರರು ಮೊದಲ 3 ರೀಚಾರ್ಜ್‌ಗಳಿಗೆ ಮಾತ್ರ ಪ್ರವೇಶವನ್ನು ಪಡೆಯುತ್ತಾರೆ.
ಜಿಯೋ ಫೈಬರ್ ಬಳಕೆದಾರರು ತಮ್ಮ ಜಿಯೋ ಸೆಟ್-ಟಾಪ್ ಬಾಕ್ಸ್ ನಲ್ಲಿ ಜಿಯೋ ಟಿವಿ + ಅಪ್ಲಿಕೇಶನ್‌ನಿಂದ ಲಯನ್ಸ್ ಗೇಟ್ ಪ್ಲೇ ಕಂಟೆಂಟ್ ಗನ್ನು ನೋಡಬಹುದಾಗಿದೆ, ಪ್ರತ್ಯೇಕ ಲಾಗ್-ಇನ್ ಅಥವಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ.
ಹೆಚ್ಚಿನ ಪ್ರೀಮಿಯಂ ಕಂಟೆಂಟ್ ಗಳನ್ನು ನೋಡಲು ಬಯಸುವ ಜಿಯೋಫೈಬರ್ ಬಳಕೆದಾರರು ಹೆಚ್ಚುವರಿ ಪ್ರೀಮಿಯಂ ಒಟಿಟಿಗಳ ಪುಷ್ಪಗುಚ್ಚದ ಆಕ್ಸಿಸ್ನೊಂದಿಗೆ ಹೆಚ್ಚಿನ ವೇಗ ಮತ್ತು ಹೆಚ್ಚಿನ ಬ್ರಾಡ್‌ಬ್ಯಾಂಡ್ ಡೇಟಾವನ್ನು ನೀಡುವ ಗ್ಲೋಲ್ಡ್ ಪ್ಲಾನ್ ಅನ್ನು ಆರಿಸಿಕೊಳ್ಳಬಹುದು.
ಗ್ಲೋಲ್ಡ್ ಪ್ಲಾನ್ ಲಾಭಗಳು:
250 MBPS ವರೆಗಿನ ಡೇಟಾ ಸ್ಪೀಡ್
ಅನ್ಲಿಮಿಟೆಡ್ ಇಂಟರ್ನೆಟ್ (ಮಾಸಿಕ 1,750 GB ಡೇಟಾ ವರೆಗೆ)
ಭಾರತದಲ್ಲಿ ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಮತ್ತು ಕಡಿಮೆ ಅಂತರರಾಷ್ಟ್ರೀಯ ಕರೆ ದರಗಳು
ಎನಿಟೈಮ್ ಟಿವಿ ಜೊತೆಗೆ ಪ್ರೀಮಿಯಂ ಒಟಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶ – ಲಯನ್ಸ್ ಗೇಟ್ ಪ್ಲೇ, ZEE 5, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, ಸೋನಿ ಲಿವ್, ಸನ್ ನೆಕ್ಸ್ಟ್, ವೂಟ್, ಆಲ್ಟ್ ಬಲಾಜಿ, ಹೊಯಿಚೋಯ್, ಶೆಮರೂಮ್, ಜಿಯೋ ಸಿನೆಮಾ ಮತ್ತು ಜಿಯೋಸಾವನ್
ಅನ್ಲಿಮಿಟೆಡ್ ವಿಡಿಯೋ ಕಾಲಿಂಗ್ & ಕಾನ್ಫರೆನ್ಸಿಂಗ್ (ಟಿವಿ ವಿಡಿಯೋ ಕಾಲಿಂಗ್ ಸಹ ಒಳಗೊಂಡಿದೆ)
ಅನ್ಲಿಮಿಟೆಡ್ ಮ್ಯೂಸಿಕ್ & ಗೇಮಿಂಗ್
ಜಿಯೋ ಅಪ್ಲಿಕೇಶನ್‌ಗಳಿಗೆ ಅನಿಯಮಿತ ಪ್ರವೇಶ