ಜನನಾಂಗದ ಮೇಲಿನ ಕೂದಲನ್ನು ತೆಗೆಯುವಾಗ ಎಚ್ಚರ ವಹಿಸಬೇಕು ಎಂಬುದನ್ನು ಹಲವು ಬಾರಿ ನಾವು ಮರೆತು ಬಿಡುತ್ತೇವೆ. ಇಲ್ಲಿ ಗಾಯಗಳಾಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. ಅದಕ್ಕೆ ಇಲ್ಲಿದೆ ಒಂದಿಷ್ಟು ಟಿಪ್ಸ್.
ಲೈಂಗಿಕ ತಜ್ಞರು ಹೇಳುವ ಪ್ರಕಾರ ನಿಂತು ಶೇವ್ ಮಾಡಿ. ಜನನಾಂಗದ ಮೇಲೆ ಸಣ್ಣ ಗೀರು ಅಗದಂತೆ ಎಚ್ಚರ ವಹಿಸಿ. ಸಂಗಾತಿಯ ನೆರವು ಪಡೆಯುವ ಬದಲು ನೀವೇ ಮುಂದೆ ನಿಂತು ಈ ಕೆಲಸ ಮಾಡಿ. ಇದರಿಂದ ಸೂಕ್ಷ್ಮ ಪ್ರದೇಶಕ್ಕೆ ಗಾಯಗಳಾಗದಂತೆ ತಡೆಯಬಹುದು.
ಸಲೂನ್ ಅಥವಾ ಸ್ಪಾದಲ್ಲಿ ಕೂದಲು ತೆಗೆಯಲು ಮರದ ಕಡ್ಡಿಗಳನ್ನು ಬಳಸಿ ಬಿಸಿಯಾದ ಮೇಣವನ್ನು ಚರ್ಮದ ಮೇಲೆ ಹರಡುತ್ತಾರೆ. ಅದಕ್ಕೂ ಮುನ್ನ ಅಲ್ಲಿನ ಸಿಬ್ಬಂದಿ ನಿಮಗೆ ಪ್ರತ್ಯೇಕ ಕಡ್ಡಿಯನ್ನು ಉಪಯೋಗಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ರೇಸರ್ ಬ್ಲೇಡ್ ಬಳಸುವವರಾಗಿದ್ದರೆ ಸ್ವಚ್ಛವಾಗಿಡಿ. ಒಮ್ಮೆ ಬಳಸಿದ ಬಳಿಕ ಕ್ಲೀನ್ ಅಗಿ ತೊಳೆದಿಡಿ. ಲೇಸರ್ ಹೇರ್ ರಿಮೂವರ್ ಬಗ್ಗೆ ಎಚ್ಚರ ಇರಲಿ. ಇಷ್ಟೆಲ್ಲ ಮುನ್ನೆಚ್ಚರಿಕೆ ವಹಿಸಿ ಚಿಕ್ಕ ಗಾಯವಾದರೂ ತಕ್ಷಣ ಚರ್ಮರೋಗ ತಜ್ಞರನ್ನು ತಪ್ಪದೇ ಸಂಪರ್ಕಿಸಿ.