ಕೆಲವರಿಗೆ ರಾಯತ ಎಂದರೆ ತುಂಬಾ ಇಷ್ಟ. ಚಪಾತಿ, ಬಿರಿಯಾನಿ, ಪುಲಾವ್ ಗೆ ಈ ರಾಯತಗಳು ಹೇಳಿ ಮಾಡಿದ್ದು. ಇಲ್ಲಿ ರುಚಿಕರವಾದ ಬಾಳೆಹಣ್ಣಿನ ರಾಯತ ಮಾಡುವ ವಿಧಾನ ಇದೆ. ಮಾಡುವುದಕ್ಕೂ ಹೆಚ್ಚು ಸಮಯ ಬೇಡ.
ಬೇಕಾಗುವ ಸಾಮಾಗ್ರಿಗಳು:
1 ಕಪ್ – ಮೊಸರು, 1 – ಹಣ್ಣಾದ ಬಾಳೆಹಣ್ಣು ದೊಡ್ಡ ಸೈಜಿನದ್ದು, ¼ ಟೀ ಸ್ಪೂನ್ – ಜೀರಿಗೆ ಪುಡಿ. ¼ ಟೀ ಸ್ಪೂನ್ – ಖಾರದ ಪುಡಿ, ಕೊತ್ತಂಬರಿ ಸೊಪ್ಪು – ಸ್ವಲ್ಪ, ರುಚಿಗೆ ತಕ್ಕಷ್ಟು – ಉಪ್ಪು.
ಮಾಡುವ ವಿಧಾನ:
ಒಂದು ಬೌಲ್ ಗೆ ಮೊಸರು ಹಾಕಿಕೊಂಡು ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಇದಕ್ಕೆ ಜೀರಿಗೆ ಪುಡಿ, ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬಾಳೆಹಣ್ಣಿನ ಸಿಪ್ಪೆ ತೆಗೆದು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿಕೊಂಡು ಇದನ್ನು ಮೊಸರಿಗೆ ಹಾಕಿ ನಿಧಾನಕ್ಕೆ ಮಿಕ್ಸ್ ಮಾಡಿ.
ಇದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಒಂದು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಟ್ಟು ನಂತರ ಸರ್ವ್ ಮಾಡಿ.